ರಕ್ಷಿತ್, ಮೇಘನಾ – ಕಿರಿಕ್ ಹುಡ್ಗನ ಹೊಸ ದಾರಿ!

Public TV
2 Min Read
RAKSHITH MEGANA

ಬೆಂಗಳೂರು: ಇತ್ತೀಚಿಗೆ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಭಾರೀ ಸದ್ದು ಮಾಡಿತ್ತು. ರಕ್ಷಿತ್ ಕೂಡ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದ್ದಿದ್ದು, ವಿದೇಶಕ್ಕೆ ತೆರಳಿದ್ದರು. ಈಗ ರಕ್ಷಿತ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ಹೊಸ ದಾರಿಯನ್ನು ಆರಂಭಿಸಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಟ ರಕ್ಷಿತ್ ಮತ್ತು ಮೇಘನಾ ಗಾಂವ್ಕರ್ ಅವರ ಫೋಟೋವೊಂದು ಹರಿದಾಡುತ್ತಿದೆ. ಈ ಫೋಟೋದಲ್ಲಿ ಇಬ್ಬರು ಪಕ್ಕಪಕ್ಕ ಕುಳಿತಿದ್ದು, ಜೋಡಿಗಳ ರೀತಿ ಕಾಣುತ್ತಿದ್ದಾರೆ. ಈ ಫೋಟೋ ತುಂಬಾ ಶೇರ್ ಆಗುತ್ತಿದ್ದು, ಮೆಚ್ಚುಗೆಯನ್ನು ಗಳಿಸುತ್ತಿದೆ.

megana 2

ಕೆಲವು ದಿನಗಳ ಹಿಂದೆ ಟೈಮ್ಸ್ KAFTA ಎಂಬ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ ವುಡ್ ನ ಬಹುತೇಕ ಗಣ್ಯರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮಕ್ಕೆ ರಕ್ಷಿತ್ ಶೆಟ್ಟಿ ಹಾಗೂ ಮೇಘನಾ ಗಾಂವ್ಕರ್ ಸಹ ಆಗಮಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅವರಿಬ್ಬರು ಅಕ್ಕ-ಪಕ್ಕ ಕುಳಿತಿದ್ದು, ಎಲ್ಲರ ಗಮನವನ್ನು ಸೆಳೆದಿದೆ.

ನಟಿ ಮೇಘನಾ ಗಾಂವ್ಕರ್ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆ ರಕ್ಷಿತ್ ಶೆಟ್ಟಿ ಜೊತೆಗೆ ಇರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಮೇಘನಾ ಅವರು ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಅನೇಕ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನೈಸ್ ಕಪಲ್, ಸೂಪರ್ ಜೋಡಿ, ಮೇಡ್ ಫಾರ್ ಈಚ್ ಅದರ್, ಬೇಗ ನೀವಿಬ್ಬರು ಮದುವೆ ಮಾಡಿಕೊಳ್ಳಿ ಎಂದು ಅನೇಕರು ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತಿದ್ದಾರೆ.

megana

ಇವರಿಬ್ಬರು ಅನೆಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬೆಂಗಳೂರು ಟೈಮ್ಸ್ ನೀಡಿದ ಪ್ರಶಸ್ತಿ ಕಾರ್ಯಕ್ರಮಕ್ಕೆ ರಕ್ಷಿತ್ ಶೆಟ್ಟಿ ಬರಲು ಸಾಧ್ಯ ಆಗಿರಲಿಲ್ಲ. ಈ ವೇಳೆ ರಕ್ಷಿತ್ ಗೆ ‘ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’ ಸಿನಿಮಾದ ಹಾಡಿಗೆ ಅತ್ಯುತ್ತಮ ಸಾಹಿತಿ ಪ್ರಶಸ್ತಿ ಸಿಕಿತ್ತು. ಆಗ ಅವರ ಪರವಾಗಿ ಮೇಘನಾ ಈ ಪ್ರಶಸ್ತಿ ಸ್ವೀಕರಿಸಿದ್ದರು.

megana 3

ನಟ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಈ ಫೋಟೋ ನೋಡಿ ಮತ್ತೆ ರಕ್ಷಿತ್ ಜೀವನದಲ್ಲಿ ಪ್ರೀತಿ ಮೂಡಿದೆ ಎನ್ನುತ್ತಿದ್ದಾರೆ. ಇವರಿಬ್ಬರು ಒಟ್ಟಾಗಿ ನಮ್ ಏರಿಯಾದಲ್ಲೊಂದ್ ದಿನ ಮತ್ತು ತುಗ್ಲಕ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಂದಿನಿಂದ ನಟ ರಕ್ಷಿತ್ ಶೆಟ್ಟಿ ಮತ್ತು ಮೇಘನಾ ಅವರು ಸ್ನೇಹಿತರಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಸುದ್ದಿಯಲ್ಲಿದ್ದ ಫಿಟ್ನೆಸ್ ಚಾಲೆಂಜ್ ವೇಳೆ ರಕ್ಷಿತ್ ಶೆಟ್ಟಿ ತಮ್ಮ ಸ್ನೇಹಿತೆ ಮೇಘನಾ ಗಾಂವ್ಕರ್ ಅವರಿಗೂ ಚಾಲೆಂಜ್ ಹಾಕಿದ್ದರು. ಅಷ್ಟೇ ಅಲ್ಲದೇ ರಕ್ಷಿತ್ ಚಾಲೆಂಜ್ ಅನ್ನು ಮೇಘನಾ ಸ್ವೀಕರಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.instagram.com/p/Bpj8lTZhMWH/

Share This Article
Leave a Comment

Leave a Reply

Your email address will not be published. Required fields are marked *