‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ (Rakesh Poojary) ಕಿರುತೆರೆಯಲ್ಲಿ ಅಲ್ಲದೇ ಹಿರಿತೆರೆಯಲ್ಲಿಯೂ ಆಕ್ಟೀವ್ ಆಗಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1) ರಾಕೇಶ್ ನಟಿಸಿದ್ದು, ತಮ್ಮ ಪಾತ್ರದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದರು ಎಂದು ಚಿತ್ರತಂಡ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು – ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಸಂತಾಪ
ರಿಷಬ್ (Rishab Shetty) ನಿರ್ದೇಶನದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ರಲ್ಲಿ ಪಾತ್ರವೊಂದರದಲ್ಲಿ ರಾಕೇಶ್ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದರು. ಈ ಚಿತ್ರದ ಮೇಲೆ ನಟ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ನಿನ್ನೆ (ಮೇ 11) ಬೆಳಗ್ಗೆ ‘ಕಾಂತಾರ’ ಶೂಟಿಂಗ್ ಮುಗಿಸಿ ಸಂಜೆ ಗೆಳೆಯರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ, ಸ್ನೇಹಿತರ ಜೊತೆ ಇದ್ದಾಗ ಹೃದಯಘಾತದಿಂದ ರಾಕೇಶ್ ನಿಧನರಾಗಿದ್ದಾರೆ. ಇದನ್ನೂ ಓದಿ:ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್ ಪೂಜಾರಿ ನಿಧನ
33ನೇ ವಯಸ್ಸಿಗೆ ರಾಕೇಶ್ ನಿಧನರಾಗಿರೋ ಸುದ್ದಿ ರಕ್ಷಿತಾ ಪ್ರೇಮ್, ಸೀರುಡೆ ರಾಘು, ಗೋವಿಂದೇ ಗೌಡ ಸೇರಿದಂತೆ ಅನೇಕರಿಗೆ ಶಾಕ್ ಕೊಟ್ಟಿದೆ.
‘ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಆಗಿದ್ದರು. ಕನ್ನಡದ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಉಡುಪಿಯ ಹೂಡೆಯಲ್ಲಿ ಇಂದು ಸಂಜೆ ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ನಡೆಯಲಿದೆ.