ಕೇಂದ್ರ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಆಗಿ ನಟ ರಾಜ್‌ಕುಮಾರ್ ರಾವ್ ನೇಮಕ

Public TV
1 Min Read
Rajkummar Rao

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ (Assembly Election) ಮುನ್ನ ನಟ ರಾಜ್‌ಕುಮಾರ್ ರಾವ್ (Rajkumar Rao) ಅವರನ್ನು ರಾಷ್ಟ್ರೀಯ ಐಕಾನ್ (National Icon) ಆಗಿ ನೇಮಿಸುವುದಾಗಿ ಚುನಾವಣಾ ಆಯೋಗ (Election Commission) ಹೇಳಿದೆ. ಈ ಸಂಬಂಧ ಗುರುವಾರ ಔಪಚಾರಿಕ ಸಮಾರಂಭ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಭಾರತದಾದ್ಯಂತ ಐದು ರಾಜ್ಯಗಳಲ್ಲಿ 161 ಮಿಲಿಯನ್ ಜನರು ಮತ ಚಲಾಯಿಸಲಿದ್ದಾರೆ ಎಂದು ಭಾರತದ ಚುನಾವಣಾ ಆಯೋಗವು ಈ ತಿಂಗಳ ಆರಂಭದಲ್ಲಿ ಘೋಷಿಸಿತು. ಇದನ್ನೂ ಓದಿ: ಮಾಜಿ ಸಿಎಂ ಹರೀಶ್ ರಾವತ್ ಇದ್ದ ಕಾರು ಡಿವೈಡರ್‌ಗೆ ಡಿಕ್ಕಿ

ನವೆಂಬರ್ 7 ರಂದು ಮಿಜೋರಾಂ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 90 ಸದಸ್ಯ ಬಲದ ವಿಧಾನಸಭೆ ಹೊಂದಿರುವ ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ನವೆಂಬರ್ 17 ಮತ್ತು 30 ರಂದು ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್

ಈ ಹಿಂದೆ ನವೆಂಬರ್ 23 ರಂದು ಚುನಾವಣೆ ನಡೆಯಬೇಕಿದ್ದ ರಾಜಸ್ಥಾನದಲ್ಲಿ ಈಗ ನವೆಂಬರ್ 25 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಲೋಕಸಭೆಗೂ ಮುನ್ನ ನಡೆಯುತ್ತಿರುವ ಈ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದರು. ಇದನ್ನೂ ಓದಿ: ಭಾರತ ಅಭಿವೃದ್ಧಿಯಾದರೆ ಕೆಲವರ ಆಟ ನಡೆಯಲ್ಲ: ಮೋಹನ್ ಭಾಗವತ್

Web Stories

Share This Article