ಕಾಲಿವುಡ್ (Kollywood) ಸ್ಟಾರ್ ರಜನಿಕಾಂತ್ (Rajanikanth) ಸದ್ಯ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. 2021 ತಮಿಳುನಾಡು ವಿಧಾನಸಭೆ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಬೇಕಿದ್ದ ತಲೈವಾ ಅವರು ರಾಜಕೀಯ (Politics) ರಂಗದಿಂದ ದೂರ ಸರಿದಿದ್ದು ಯಾಕೆ? ಅವರು ಈ ನಿರ್ಧಾರ ಮಾಡಲು ಕಾರಣವೇನು ಎಂಬುದನ್ನ ಇದೀಗ ನಟ ರಿವೀಲ್ ಮಾಡಿದ್ದಾರೆ.
ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಸೂಪರ್ ಸ್ಟಾರ್ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಸಿನಿಮಾ ಬಿಟ್ಟು ಸಮಾಜಮುಖಿ ಕಾರ್ಯಗಳ ಮೂಲಕ ಕೂಡ ಅವರು ಗುರುತಿಸಿಕೊಂಡಿದ್ದಾರೆ. ತಮ್ಮದೇ ಒಂದು ಪಕ್ಷ ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಕಲ ಸಿದ್ಧತೆ ನಡೆದಿತ್ತು. 2021ರಲ್ಲಿ ವಿಧಾನಸಭೆ ಚುನಾವಣೆ ಅಖಾಡಕ್ಕೆ ತಲೈವಾ ಇಳಿಯಬೇಕಿತ್ತು. ಆದರೆ ಅನಾರೋಗ್ಯದ ಕಾರಣದಿಂದ ನಟ ದೂರ ಸರಿದಿದ್ದರು. ಇದನ್ನೂ ಓದಿ: 25ನೇ ಚಿತ್ರದಲ್ಲಿ ಗುರುದೇವ್ ಹೊಯ್ಸಳನಾದ ಧನಂಜಯ್
ರಾಜಕೀಯ ಪ್ರವೇಶ ನಿರ್ಧಾರ ಕೈಬಿಡುವ ನಿರ್ಣಯಕ್ಕೆ ತಲೈವಾ ಬರಲು ಪ್ರಮುಖ ಕಾರಣ ಹಾಗೂ ರಾಜಕೀಯದಿಂದ ಹಿಂದೆ ಸರಿಯುವಂತೆ ರಜನೀಕಾಂತ್‌ರ ಮನವೊಲಿಸಿದ್ದು ವೈದ್ಯ ರವಿಚಂದ್ರನ್. ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಜನೀಕಾಂತ್, ನಾನು ರಾಜಕೀಯದಿಂದ ದೂರ ಉಳಿಯುವಂತೆ ನನ್ನ ಮನಃಪರಿವರ್ತನೆ ಮಾಡಿದ್ದು, ವೈದ್ಯ ರವಿಚಂದ್ರನ್ (Dr. Ravichandran) ಎಂದು ಹೇಳಿದ್ದಾರೆ.
2010ರಿಂದ ನನಗೆ ವೈದ್ಯ ರವಿಚಂದ್ರನ್ ಪರಿಚಯವಿದೆ. ನನಗೆ ಕಿಡ್ನಿ ಸಮಸ್ಯೆಯಾದಾಗ ಅವರು ನನಗೆ ಸಹಾಯ ಮಾಡಿದರು. ಕೋವಿಡ್ ಸಮಯದಲ್ಲಿ ಸಹ ಅವರು ನನಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ನೀಡಿದ್ದರು. ರಾಜಕೀಯಕ್ಕೆ ಬರಬೇಕೆಂದರೆ ಈ ಎಚ್ಚರಿಕೆಗಳನ್ನು ಪಾಲಿಸಬೇಕು ಎಂದರು. ಅವರ ಎಚ್ಚರಿಕೆಗಳನ್ನು ಪಾಲಿಸಿ ಕೋವಿಡ್ ಅನ್ನು ದಾಟಿಕೊಂಡೆ ಎಂದಿದ್ದಾರೆ.
ಆರೋಗ್ಯಕ್ಕಾಗಿ (Health) ರಾಜಕೀಯದಿಂದ ಹಿಂದೆ ಸರಿಯುವ ಪರಿಸ್ಥಿತಿ ವದಗಿ ಬಂತು. ತಾನು ನೀಡಿದ ಭರವಸೆಗಳನ್ನು ಪೂರೈಸಲಿಲ್ಲ, ಮಾತುಕೊಟ್ಟು ಹಿಂದೆ ಸರಿದ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದು ನಾನು ಅವರ ಬಳಿ ಬೇಸರ ತೋಡಿಕೊಂಡೆ. ಆಗ ಅವರು, ನಾನೇ ಬೇಕಾದರೆ ಪ್ರೆಸ್ ಮೀಟ್ ಮಾಡಿ ನಿಮ್ಮ ಆರೋಗ್ಯ ಸ್ಥಿತಿಯನ್ನು ವಿವರಿಸುತ್ತೇನೆ, ನಾನೇ ನಿಮ್ಮನ್ನು ಬಲವಂತ ಮಾಡಿದೆ ಎಂಬುದನ್ನು ಹೇಳುತ್ತೇನೆ ಎಂದಿದ್ದರು ಎಂದು ರಜನಿಕಾಂತ್ ಮಾತನಾಡಿದ್ದಾರೆ.