ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ತಲೈವಾರನ್ನು ದಾಖಲಿಸಲಾಗಿದೆ. ನಟನ ಅನಾರೋಗ್ಯದ ಸುದ್ದಿ ಕೇಳಿ ಆತಂಕದಲ್ಲಿರುವ ಫ್ಯಾನ್ಸ್‌ಗೆ ರಜನಿಕಾಂತ್ ಪತ್ನಿ ಹೆಲ್ತ್ ಅಪ್‌ಡೇಟ್ ತಿಳಿಸಿದ್ದಾರೆ. ಆತಂಕಪಡಬೇಡಿ, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸೋಮವಾರ (ಸೆ.30) ತಡರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್‌ರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ಕೂಡ ನೀಡಲಾಗಿದೆ. ಇದೀಗ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ರಚಿತಾ ರಾಮ್- ಫ್ಯಾನ್ಸ್ ಬೇಸರ
73 ವರ್ಷದ ತಲೈವಾ ಅನಾರೋಗ್ಯದ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಿದ್ದ ಅಭಿಮಾನಿಗಳಿಗೆ ರಜನಿಕಾಂತ್ ಪತ್ನಿ ಲತಾ (Latha) ಸ್ಪಷ್ಟನೆ ನೀಡಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಈ ಸುದ್ದಿ ಕೇಳಿ ಫ್ಯಾನ್ಸ್ ನಿರಾಳವಾಗಿದ್ದಾರೆ. ಆದಷ್ಟು ಬೇಗ ತಲೈವಾ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಅಂದಹಾಗೆ, ಇದೇ ಅಕ್ಟೋಬರ್ 10ರಂದು ರಜನಿಕಾಂತ್ ನಟನೆಯ ’ವೆಟ್ಟೈಯಾನ್’ (Vettaiyan) ಸಿನಿಮಾ ರಿಲೀಸ್ ಆಗಲಿದೆ.