WAVES 2025: ನರೇಂದ್ರ ಮೋದಿ ಫೈಟರ್, ಯಾವ್ದೇ ಸವಾಲು ಎದುರಿಸುತ್ತಾರೆ- ರಜನಿಕಾಂತ್

Public TV
1 Min Read
rajinikanth

ಮುಂಬೈನಲ್ಲಿ ವೇವ್ಸ್ ಸಮ್ಮೇಳನಕ್ಕೆ (World Audio Visual and Entertainment Summit) ಪಿಎಂ ನರೇಂದ್ರ ಮೋದಿ (Narendra Modi) ಅವರು ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್ ಅವರು ನರೇಂದ್ರ ಮೋದಿ ಅವರನ್ನು ಫೈಟರ್ ಎಂದು ಹೇಳುವ ಮೂಲಕ ಕೊಂಡಾಡಿದ್ದಾರೆ. ಇದನ್ನೂ ಓದಿ:ಜ್ಯೋತಿ ರೈ ನಟನೆಯ ‘ಕಿಲ್ಲರ್’ ಚಿತ್ರದ ಟೀಸರ್ ರಿಲೀಸ್

Narendra Modi 2

ಕಾರ್ಯಕ್ರಮಲ್ಲಿ ರಜನಿಕಾಂತ್ (Rajinikanth) ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ಕಾರ್ಯಕ್ರಮವನ್ನು ಮುಂದೂಡಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ನನಗೆ ಮೋದಿ ಅವರ ಮೇಲೆ ನಂಬಿಕೆಯಿತ್ತು. ಈ ಕಾರ್ಯಕ್ರಮ ಖಂಡಿತವಾಗಿಯೂ ನಡೆಯುತ್ತೆ ಎಂದು ವಿಶ್ವಾಸವಿತ್ತು ಎಂದರು. ಇದನ್ನೂ ಓದಿ:ಪಹಲ್ಗಾಮ್‌ ದಾಳಿಗೆ ಮುನೀರ್‌, ಪಾಕ್‌ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್‌ ನಟಿ ಕೆಂಡಾಮಂಡಲ

rajinikanthನರೇಂದ್ರ ಮೋದಿ ಒಬ್ಬ ಫೈಟರ್. ಅವರು ಎಂತಹ ಸವಾಲನ್ನು ಬೇಕಾದರೂ ಎದುರಿಸುತ್ತಾರೆ. ಅದನ್ನು ಅವರು ಈಗಾಗಲೇ ನಿರೂಪಿಸಿದ್ದಾರೆ. ನಾವು ಕಳೆದ ಒಂದು ದಶಕದಿಂದ ನೋಡುತ್ತಲೇ ಬಂದಿದ್ದೇವೆ. ಕಾಶ್ಮೀರದ ಪರಿಸ್ಥಿತಿಯನ್ನು ಅವರು ಧೈರ್ಯದಿಂದ ಮತ್ತು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ, ನಮ್ಮ ದೇಶಕ್ಕೆ ಅವರು ಕಳೆ ತರಲಿದ್ದಾರೆ ಎಂದು ತಲೈವಾ ಕೊಂಡಾಡಿದ್ದಾರೆ.

RAJINIKANTH CHIRANJEEVIವೇವ್ಸ್ ಸಮ್ಮೇಳನಕ್ಕೆ (Waves 2025) ಭಾಗಿಯಾಗಿರೋದು ನನ್ನ ಸೌಭಾಗ್ಯ. ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿರೋದಕ್ಕಾಗಿ ಕೇಂದ್ರ ಸರ್ಕಾರಕ್ಕೆ ನನ್ನ ಅಭಿನಂದನೆಗಳು ಎಂದು ರಜನಿಕಾಂತ್ ಮಾತನಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಜನಿಕಾಂತ್ ಜೊತೆ ಮೆಗಾಸ್ಟಾರ್ ಚಿರಂಜೀವಿ, ಹೇಮಾ ಮಾಲಿನಿ, ಮೋಹನ್‌ಲಾಲ್, ಅಕ್ಷಯ್ ಕುಮಾರ್, ಮೋಹನ್‌ಲಾಲ್, ದೀಪಿಕಾ ಪಡುಕೋಣೆ, ರಾಜಮೌಳಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

Share This Article