ಈ ವರ್ಷದ ದಸರಾ ಹಬ್ಬಕ್ಕೆ ಸ್ಯಾಂಡಲ್‌ವುಡ್‌ನ ಹೈವೋಲ್ಟೇಜ್ ಸಿನಿಮಾ ‘ಮಾರ್ಟಿನ್’ (Martin) ತೆರೆಗಪ್ಪಳಿಸೋಕೆ ಸಜ್ಜಾಗಿ ನಿಂತಿದೆ. ಮತ್ತೊಂದು ಕಡೆ ಟಾಲಿವುಡ್‌ನ ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ ‘ದೇವರ’ ಚಿತ್ರ ಕೂಡ ಅಕ್ಟೋಬರ್ 10ರಂದು ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇದೀಗ ಕಾಲಿವುಡ್‌ನಿಂದಲೂ ತಲೈವ ತಮ್ಮ ಅಭಿಮಾನಿ ಬಳಗಕ್ಕೆ ಬಿಗ್ ಸರ್ಪ್ರೈಸ್ ಒಂದನ್ನ ನೀಡಿದ್ದಾರೆ. ಇದನ್ನೂ ಓದಿ:ತಮಿಳಿಗನೊಬ್ಬ ಭಾರತವನ್ನು ಆಳಬೇಕು ಎಂಬ ಕನಸಿದೆ ಎಂದ ಕಮಲ್ ಹಾಸನ್
ಹೌದು, ಒಂದು ಕಡೆ ‘ದೇವರ’ (Devara) ಅಕ್ಟೋಬರ್ 10ಕ್ಕೆ ತೆರೆಕಾಣ್ತಿದೆ. ಮತ್ತೊಂದೆಡೆ ‘ಮಾರ್ಟಿನ್’ ಚಿತ್ರ ಅಕ್ಟೋಬರ್ 11ಕ್ಕೆ ಕೇವಲ ಒಂದು ದಿನದ ಅಂತರದಲ್ಲಿ ಸೌತ್‌ನ ಇಬ್ಬರು ಬಿಗ್ ಸ್ಟಾರ್ಸ್ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ ಅನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಮತ್ತೊಂದು ಬಿಗ್ ಸರ್ಪ್ರೈಸ್ ತಲೈವಾ ಕಡೆಯಿಂದ ಸಿಕ್ಕಿದೆ. ರಜನಿಕಾಂತ್ (Rajanikanth) ನಟನೆಯ ವೆಟ್ಟೈಯಾನ್ (Vettaiyan) ಸಿನಿಮಾ ಇದೇ ಅಕ್ಟೋಬರ್ 10ಕ್ಕೆ ದಸರಾ ಹಬ್ಬದ ಉಡುಗೊರೆಯಾಗಿ ಬೆಳ್ಳಿ ಪರದೆ ಮೇಲೆ ಆಟವನ್ನ ಶುರು ಮಾಡಲಿದೆಯಂತೆ. ಹೀಗಂತ ಖುದ್ದು ರಜನಿಕಾಂತ್ ಹೇಳಿದ್ದಾರೆ.
ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಹಿಮಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಯೋಗಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಸಿನಿಮಾದ ರಿಲೀಸ್ ಡೇಟ್ ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ’ವೆಟ್ಟೈಯಾನ್’ ಚಿತ್ರ ಅಕ್ಟೋಬರ್ 10 ದಸರಾಗೆ ತೆರೆಗೆ ಬರುತ್ತೆ. ಜೂನ್ 10ರಿಂದ ‘ಕೂಲಿ’ (Coolie) ಸಿನಿಮಾ ಶೂಟಿಂಗ್ ಪ್ರಾರಂಭ ಮಾಡ್ತೀನಿ ಅಂತ ತಲೈವಾ ಹೇಳಿದ್ದಾರೆ.
ದಸರಾ ಹಬ್ಬವನ್ನೇ ಟಾರ್ಗೇಟ್ ಮಾಡಿದ ಸೌತ್ ಸಿನಿ ದುನಿಯಾ, ಒಂದಲ್ಲ ಎರಡಲ್ಲ ಭರ್ತಿ ಮೂರು ಸಿನಿಮಾಗಳು ತೆರೆಗೆ ಬರೋಕೆ ಸಜ್ಜಾಗಿವೆ. ಆದರೆ ಈ ಮೂರು ಸಿನಿಮಾಗಳ ರಿಲೀಸ್ ಡೇಟ್‌ನಲ್ಲಿ ಏನಾದರೂ ಬದಲಾವಣೆ ಆಗಬಹುದಾ? ಅನ್ನುವ ಗುಸು-ಗುಸು ಮಾತುಗಳು ಶುರುವಾಗಿವೆ. ಒಟ್ಟಿನಲ್ಲಿ ಈ ಬಾರಿಯ ದಸರಾ ಸಿನಿ ರಸಿಕರ ಪಾಲಿಗೆ ಡಬಲ್ ಅಲ್ಲ ತ್ರಿಬಲ್ ಧಮಾಕಾ ಆಗೋದಂತು ಪಕ್ಕಾ.