ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಡಿ.12ರಂದು 74ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ‘ಜೈಲರ್’ ಟೀಮ್ ಫ್ಯಾನ್ಸ್‌ಗೆ ‘ಜೈಲರ್ 2’ (Jailer 2) ಬಗ್ಗೆ ಅಪ್‌ಡೇಟ್ ಕೊಡೋದಾಗಿ ಸುಳಿವು ನೀಡಿದೆ. ಡಿ.12ರಂದು ರಜನಿಕಾಂತ್ ಸಿನಿಮಾ ಬಗ್ಗೆ ಬಿಗ್ ನ್ಯೂಸ್ ಹೊರಬೀಳಲಿದೆ. ಇದನ್ನೂ ಓದಿ:‘ಮನದ ಕಡಲು’ ಚಿತ್ರಕ್ಕಾಗಿ ಮತ್ತೆ ‘ಮುಂಗಾರು ಮಳೆ’ ನಿರ್ಮಾಪಕನ ಜೊತೆ ಕೈಜೋಡಿಸಿದ ಯೋಗರಾಜ್ ಭಟ್
ಡಿ.12 ಅಭಿಮಾನಿಗಳ ಪಾಲಿಗೆ ಹಬ್ಬ. ನೆಚ್ಚಿನ ನಟ ತಲೈವಾಗೆ ಹುಟ್ಟುಹಬ್ಬದ ಸಂಭ್ರಮವಾಗಿದೆ. ಇದೀಗ ‘ಜೈಲರ್’ ನಿರ್ದೇಶಕ ನೆಲ್ಸನ್ ರಜನಿಕಾಂತ್, ಶಿವಣ್ಣ, ಜಾಕಿ ಶ್ರಾಫ್, ಮೋಹನ್ ಲಾಲ್ ಸೇರಿದಂತೆ ಅನೇಕರ ಪೋಸ್ಟರ್ ಅನ್ನು ಮತ್ತೊಮ್ಮೆ ಶೇರ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಅದಷ್ಟೇ ಅಲ್ಲ, ಈ ಮೂಲಕ ಪಾರ್ಟ್ 2ನಲ್ಲಿ ಈ ಪಾತ್ರಗಳು ಕಂಟಿನ್ಯೂ ಆಗುವ ಸೂಚನೆ ಕೂಡ ನೀಡಿದ್ದಾರೆ.
View this post on Instagram
ಮೂಲಗಳ ಪ್ರಕಾರ, ಡಿ.5ರಂದು ‘ಜೈಲರ್ ಪಾರ್ಟ್ 2’ರ ಪ್ರೋಮೋ ನಡೆಯಲಿದ್ದು, ಡಿ.12ರಂದು ತಲೈವಾ ಬರ್ತ್‌ಡೇಗೆ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ ಎನ್ನಲಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡುವವರೆಗೂ ಕಾದುನೋಡಬೇಕಿದೆ.
ಸದ್ಯ ಮತ್ತೊಮ್ಮೆ ‘ಜೈಲರ್’ ಸಿನಿಮಾದ ಫೋಟೋಸ್ ಶೇರ್ ಮಾಡಿ ಹಿಂಟ್ ಪಾರ್ಟ್ 2 ಕುರಿತು ಕೊಟ್ಟಿರೋದ್ದಕ್ಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ಜೈಲರ್ 2’ ಜೊತೆ ‘ಕೂಲಿ’ ಸಿನಿಮಾದ ಅಪ್‌ಡೇಟ್‌ಗೆ ಎದುರು ನೋಡುತ್ತಿದ್ದಾರೆ.