ಸ್ಯಾಂಡಲ್ವುಡ್ ಮಾತ್ರವಲ್ಲ, ಚಿತ್ರರಂಗದಲ್ಲಿ ಶೆಟ್ರ ಹವಾ ಹೋರಾಗಿದೆ. ತ್ರಿಬಲ್ ಆರ್ ಹಾವಳಿ ಜಾಸ್ತಿಯಾಗಿದೆ. ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ಸಿನಿಮಾ ಬರುತ್ತಿದೆ ಎಂದರೆ ಕಾದು ಕುಳಿತು ಸಿನಿಮಾ ನೋಡುವ ಅಭಿಮಾನಿಗಳಿದ್ದಾರೆ. ಈ ನಡುವೆ ರಾಜ್ ಬಿ ಶೆಟ್ಟಿ ಅವರು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ‘ಟೋಬಿ’ (Toby) ಸಿನಿಮಾ ಮೂಲಕ ರಾಜ್ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. ಸದ್ಯ ‘ಟೋಬಿ’ ಸಿನಿಮಾದ ಫಸ್ಟ್ ಲುಕ್ ಮೂಲಕ ರಾಜ್ ಬಿ ಶೆಟ್ಟಿ (Raj B Shetty) ಸಂಚಲನ ಮೂಡಿಸಿದ್ದಾರೆ.
ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ನಟ ಕಮ್ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ ಅವರು ಭಿನ್ನ ಕಥೆಗಳನ್ನ ಆಯ್ಕೆ ಮಾಡಿ, ಸಿನಿಮಾ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ರಾಜ್ ಬಿ ಶೆಟ್ಟಿ, ಅವರ ಮೇಲಿನ ಕ್ರೇಜ್ ಫ್ಯಾನ್ಸ್ಗೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ‘ಟೋಬಿ’ ಚಿತ್ರದ ಸುದ್ದಿನೂ ಅದಕ್ಕೆ ಸಾಕ್ಷಿ ಆಗಿದೆ. ಸೋಷಿಯಲ್ ಮೀಡಿಯಾದ ಯಾವುದೇ ಪೇಜ್ ತೆಗೆದ್ರು ಅಷ್ಟೇನೆ, ಅಲ್ಲಿ `ಟೋಬಿ’ ಚಿತ್ರದ ಕ್ರೇಜ್ ಕಂಡು ಬರುತ್ತಿದೆ. ಅಷ್ಟರ ಮಟ್ಟಿಗೆ ಸಿನಿಮಾ ರಿಲೀಸ್ ಮುನ್ನವೇ ಸಂಚಲನ ಸೃಷ್ಟಿಸಿದೆ.
Time to halt your clocks and… feel the fever!! Lifting the drape on the fiery rendition of #???????????????????????????????????????????????????? ????❤️????
???????? ???????????????????????????? ???????? ????????????????????????, ???????????????? #TobyOnAug25 @rajbshettyOMK #BasilALChalakkal @Chaithra_Achar_ @samyuktahornad #PraveenShriyan pic.twitter.com/sJlJVCMejU
— Raj B Shetty (@RajbShettyOMK) June 29, 2023
ಇತ್ತೀಚಿಗಷ್ಟೇ ಟೋಬಿ ಸಿನಿಮಾದ ಸಣ್ಣ ಝಲಕ್ವೊಂದು ರಿವೀಲ್ ಆಗಿತ್ತು. ಇದು ಸೋಷಿಯಲ್ ಮೀಡಿಯಾ ಶೇಕ್ ಮಾಡುವಷ್ಟು ಸಿನಿಪ್ರಿಯರ ಗಮನ ಸೆಳೆಯಿತು. ಈಗ ಟೋಬಿ ಚಿತ್ರದ ಫಸ್ಟ್ ರಿವೀಲ್ ಆಗಿದೆ. ಅದರಲ್ಲಿ ರಾಜ್ ಬಿ ಶೆಟ್ಟಿ ಅವರು ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೂಗಿಗೆ ರಿಂಗ್ ಧರಿಸಿದ್ದು, ಮುಖದ ಇಂಟು ಮಾರ್ಕ್ ಇದೆ. ಟೋಟಲಿ ರಾ ಲುಕ್ನಲ್ಲಿ ಶೆಟ್ರು ಶೈನ್ ಆಗಿದ್ದಾರೆ. ಫಸ್ಟ್ ಲುಕ್ ಟೀಸರ್ನಲ್ಲಿ ರಕ್ತ-ಸಿಕ್ತ ಅವತಾರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ‘ಟೋಬಿ’ ಸಿನಿಮಾದ ಮೂಲಕ ಶೆಟ್ರು ಏನೋ ಹೇಳೋದ್ದಕ್ಕೆ ಹೊರಟಿದ್ದಾರೆ ಏನು ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಮೂಡಿದೆ. ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ಚೈತ್ರಾ ಆಚಾರ್ ನಟಿಸಿದ್ದಾರೆ. ಇದನ್ನೂ ಓದಿ:ರಾಘವ್ ಲಾರೆನ್ಸ್-ಕಂಗನಾ ನಟನೆಯ ‘ಚಂದ್ರಮುಖಿ 2’ ಎಂಟ್ರಿಗೆ ಮುಹೂರ್ತ ಫಿಕ್ಸ್
‘ಟೋಬಿ’ ಸಿನಿಮಾದಲ್ಲಿ ಕಂಟೆಂಟ್ ಇದೆ. ಕಮರ್ಷಿಯಲ್ ಟಚ್ ಕೂಡ ಇದೆ. ಎರಡೂ ಇರೋ ಈ ಚಿತ್ರವನ್ನ ಕಂಟೆಂಟ್ ಬೇಸ್ ಕಮರ್ಷಿಯಲ್ ಸಿನಿಮಾ ಅಂತಲೇ ರಾಜ್ ಬಿ ಶೆಟ್ರು ಹೇಳಿಕೊಂಡಿದ್ದಾರೆ. ಜೊತೆಗೆ ಈ ಚಿತ್ರದ ರಾಜ್ ಬಿ ಶೆಟ್ರ ಚಿತ್ರ ಜೀವನದ ಮೊದಲ ಕರ್ಮಷಿಯಲ್ ಸಿನಿಮಾ ಕೂಡ ಆಗಿದೆ. ಫಸ್ಟ್ ಲುಕ್ ನೋಡಿದ್ರೆ ರಾಜ್ ಬಿ ಶೆಟ್ಟಿ ಅವರ ಕೆರಿಯರ್ನಲ್ಲಿ ಈ ಸಿನಿಮಾ ಮೈಲುಗಲ್ಲು ಸೃಷ್ಟಿಸೋದಂತೂ ಗ್ಯಾರೆಂಟಿ ಅಂತಿದ್ದಾರೆ ಸಿನಿಪಂಡಿತರು.