ಪ್ರೀತಿಸಿದ ಹುಡುಗಿಯೊಂದಿಗೆ ನಟ ರಘು ಭಟ್ ವಿವಾಹ ಬಂಧನ!

Public TV
1 Min Read
RaghuBhat Marriage 1

ಬೆಂಗಳೂರು : ನಟ ರಘು ಭಟ್ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಹಲವಾರು ವರ್ಷಗಳಿಂದ ಪ್ರೀತಿಸಿದ್ದ ಹುಡುಗಿ ಸುಗುಣರನ್ನು ಮದುವೆಯಾಗಿರೋ ರಘು ಭಟ್ ಅವರ ಆರತಕ್ಷತೆ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನೆರವೇರಿದೆ. ಚಿತ್ರರಂಗದ ನಟ ನಟಿಯರು, ತಂತ್ರಜ್ಞರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಈ ಸಂಭ್ರಮದಲ್ಲಿ ಉಪಸ್ಥಿತರಿದ್ದು ಈ ಜೋಡಿಗೆ ಶುಭ ಕೋರಿದ್ದಾರೆ.

ಸರ್ವಸ್ವ ಚಿತ್ರದ ಮೂಲಕವೇ ನಾಯಕ ನಟನಾಗಿ ಅಡಿಯಿರಿಸಿದ್ದ ರಘು ಭಟ್ ಬಾಲ್ಯ ಕಲಾವಿದರಾಗಿ ಬಣ್ಣ ಹಚ್ಚಿದ್ದವರು. ಶಿವರಾಜ್ ಕುಮಾರ್ ಅಭಿನಯದ ಕೃಷ್ಣಲೀಲೆ ಚಿತ್ರದ ಮೂಲಕ ನಟನೆ ಆರಂಭಿಸಿದ್ದ ಅವರು ಕಲೆಯ ವ್ಯಾಮೋಹದಿಂದಲೇ ಇಂದು ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ಹೀಗೆ ತಮ್ಮ ವೃತ್ತಿ ಜೀವನವನ್ನು ಹೊಳಪಾಗಿಸಿಕೊಂಡಿರೋ ರಘು ಭಟ್ ಅವರಿಗೆ ಸುಗುಣಾ ಪರಿಚಯವಾದದ್ದು ಸಮಾರಂಭವೊಂದರಲ್ಲಂತೆ. ಅಲ್ಲಿಂದಲೇ ಸ್ನೇಹ ಮೂಡಿಕೊಂಡು, ಅದು ಪ್ರೀತಿಯಾಗಿ ಈ ಮದುವೆಯ ಮೂಲಕ ಅವರಿಬ್ಬರೂ ಶಾಶ್ವತವಾಗಿ ಒಂದಾಗಿದ್ದಾರೆ.

RaghuBhat Marriage 18 copy

ದಾದಾ ಈಸ್ ಬ್ಯಾಕ್, ಅನ್ವೇಷಿ, ಕರ್ವ ಮುಂತಾದ ಚಿತ್ರಗಳಲ್ಲಿ ಗಮನಾರ್ಹವಾದ ಅಭಿನಯ ನೀಡಿದ್ದ ರಘು ಭಟ್ ಇದೀಗ ನಾಯಕ ನಟನಾಗಿಯೂ ನೆಲೆ ನಿಲ್ಲುತ್ತಿದ್ದಾರೆ. ಅವರ ಮುಂದೆ ಹಲವಾರು ಚಿತ್ರಗಳ ಅವಕಾಶಗಳೂ ಇವೆ. ಈ ಹೊತ್ತಿನಲ್ಲಿಯೇ ಪ್ರೀತಿಸಿದ ಹುಡುಗಿ ಸುಗುಣಾರೊಂದಿಗೆ ಹೊಸ ಬದುಕಿಗೆ ಅಡಿಯಿರಿಸಿರುವ ರಘು ಭಟ್ ಅವರಿಗೆ ಒಳಿತಾಗಲೆಂದು ಹಾರೈಸೋಣ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *