ಚಿಕ್ಕಮಗಳೂರಿಗೆ ನಟ ಪುನೀತ್ ರಾಜ್ ಕುಮಾರ್ ಭೇಟಿ!

Public TV
1 Min Read
punith

ಚಿಕ್ಕಮಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್ ಕುಮಾರ್ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.

`ರಾಜಕುಮಾರ’ ಚಿತ್ರ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ ರಾಮ್ ಚಿಕ್ಕಮಳೂರಿನ ಮಿಲನ ಚಿತ್ರಮಂದಿರಕ್ಕೆ ಚಿತ್ರದ ಪ್ರಮೋಷನ್‍ಗಾಗಿ ಭೇಟಿ ನೀಡಿದ್ರು. ಇದೇ ವೇಳೆ ಪುನೀತ್ ಚಿತ್ರದ ಟೈಟಲ್ ಹಾಡನ್ನ ಹಾಡಿ ಅಭಿಮಾನಿಗಳನ್ನ ರಂಜಿಸಿದ್ರು.

CKM PUNITH

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್, `ನಾನು ಚಿಕ್ಕಮಗಳೂರಿಗೆ ಯಾವಾಗ್ಲೂ ಬರ್ತಿರ್ತೇನೆ. ಆದ್ರೆ ಈ ಭೇಟಿ ತುಂಬಾ ವಿಶೇಷವಾದದ್ದು. ಯಾಕಂದ್ರೆ ಅಪ್ಪು ಸಿನಿಮಾದ ಬಳಿಕ ಚಿತ್ರದ ಪ್ರಮೋಷನ್‍ಗಾಗಿ ಇದೇ ಮೊದಲು ಚಿಕ್ಕಮಗಳೂರಿಗೆ ಬರ್ತಿದ್ರೋದು ಅಂದ್ರು. ಇನ್ನು ಇಲ್ಲಿಂದ ಹಾಸನ ಹಾಗೂ ಮೈಸೂರಿಗೆ ತೆರಳುವುದಾಗಿ ಹೇಳಿದ್ರು.

PUBITH 6

ಪುನೀತ್ ಭೇಟಿ ನೀಡಿದ ವಿಷಯ ತಿಳಿಯುತ್ತಿದ್ದಂತೆಯೇ ತಮ್ಮ ನೆಚ್ಚಿನ ನಟನನ್ನ ನೋಡಲು ಚಿತ್ರಮಂದಿರದ ಹೊರಗೆ ಸಾವಿರಾರು ಅಭಿಮಾನಿಗಳು ಸೇರಿದ್ರು. ಪುನೀತ್ ಭಾಷಣದುದ್ದಕ್ಕೂ ಚಿಕ್ಕಮಗಳೂರು ಅಳಿಯನಿಗೆ ಜೈ ಅಂತಾ ಅಭಿಮಾನಿಗಳು ಘೋಷಣೆ ಕೂಗಿದ್ರು.

vlcsnap 2017 05 13 16h04m36s177

CKM PUNITH 2

CKM PUNITH 4

vlcsnap 2017 05 13 16h09m58s67

Share This Article
Leave a Comment

Leave a Reply

Your email address will not be published. Required fields are marked *