Wednesday, 18th July 2018

ಪುಟ್ಟ ಅಭಿಮಾನಿಗೆ ಅಪ್ಪು ಆಸರೆ – ಕೊಟ್ಟ ಮಾತಿನಂತೆ ಪ್ರೀತಿಗೆ ಮಣಿಪಾಲ್‍ನಲ್ಲಿ ಕಿಡ್ನಿ ಆಪರೇಷನ್

ಬೆಂಗಳೂರು: ದಾವಣಗೆರೆ ಮೂಲದ ಪುನೀತ್ ಅಭಿಮಾನಿಯಾದ ಪುಟ್ಟ ಬಾಲಕಿಯ ಕಿಡ್ನಿ ವೈಫಲ್ಯದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿಯ ನಂತರ ಪುನೀತ್ ಅಭಿಮಾನಿಯನ್ನು ಭೇಟಿ ಮಾಡಿ ಕಿಡ್ನಿ ಹಾಕಿಸಿ ಚಿಕಿತ್ಸೆ ಕೊಡಿಸೋದಾಗಿ ಹೇಳಿದ್ರು. ಅದರಂತೆಯೆ ಈಗ ಪುಟ್ಟ ಬಾಲಕಿಯ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ.

ದಾವಣಗೆರೆ ಮೂಲದ 12 ವರ್ಷದ ಬಾಲಕಿ ಪ್ರೀತಿ ಪವರ್‍ಸ್ಟರ್ ಪುನೀತ್ ರಾಜ್‍ಕುಮಾರ್ ಅವರ ಕಟ್ಟಾ ಅಭಿಮಾನಿ. ಈಕೆ ಆರನೇ ತರಗತಿ ಓದುತ್ತಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಳು. ಜೀವನದ ಮೇಲೆ ಆಸೆಯನ್ನೇ ತೊರೆದಿದ್ದ ಈಕೆಗೆ ಒಮ್ಮೆ ಪುನೀತ್‍ರನ್ನ ನೋಡಬೇಕು, ನಂತರ ನನ್ನ ಪ್ರಾಣ ಹೋದರೂ ಪರವಾಗಿಲ್ಲ ಎಂದಿದ್ದಳು. ಇದನ್ನ ಪುನೀತ್ ಹುಟ್ಟುಹಬ್ಬದಂದು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಪುನೀತ್ ರಾಜ್‍ಕುಮಾರ್ ಬಾಲಕಿ ಭೇಟಿ ಮಾಡಿ ಚಿಕಿತ್ಸೆ ಕೊಡಿಸೋದಾಗಿ ಹೇಳಿದ್ರು. ಅದರಂತೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸ್ತಿದ್ದಾರೆ.

ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಯಾರಾದ್ರೂ ಕಿಡ್ನಿ ದಾನ ಮಾಡಿದ್ರೆ ಬದುಕುವ ಭರವಸೆ ನೀಡಿದ್ರು ವೈದ್ಯರು. ಅದರಂತೆ ಬಾಲಕಿ ತಂದೆ ಕುಮಾರ್ ಮಗಳ ಭವಿಷ್ಯಕ್ಕಾಗಿ ಒಂದು ಕಿಡ್ನಿಗಳನ್ನು ದಾನ ಮಾಡ್ತಿದ್ದಾರೆ. ಮಣಿಪಾಲ್ ವೈದ್ಯರು ತಂದೆಯ ಕಿಡ್ನಿಯನ್ನು ಮಗಳಿಗೆ ಜೋಡಣೆ ಮಾಡಲು ಸಿದ್ಧರಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ಮಾಡ್ತಿದ್ದಾರೆ.

ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿರೋ ಪುನೀತ್, ಬಾಲಕಿಗೆ ಬದುಕು ನೀಡ್ತಿರೋದು ನಿಜಕ್ಕೂ ಶ್ಲಾಘನೀಯ.

Leave a Reply

Your email address will not be published. Required fields are marked *