ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಬ್ಯಾನರ್ ಕಟ್ಟಿದ ಸಲುವಾಗಿ ಗ್ರಾಮಸ್ಥರು ಮತ್ತು ಅಪ್ಪು ಫ್ಯಾನ್ಸ್ ನಡುವೆ ಗಲಾಟೆ ನಡೆದಿದೆ. ಈ ಘಟನೆಯ ಕುರಿತಂತೆ ಅನೇಕ ಅಪ್ಪು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್
Advertisement
ಪುನೀತ್ ರಾಜ್ ಕುಮಾರ್ ಸಾವಿನ ನಂತರ ದೇಶಾದ್ಯಂತ ಅವರ ಫೋಟೋ ಮತ್ತು ಬ್ಯಾನರ್ಸ್ ಕಟ್ಟಿ ಅಭಿಮಾನ ತೋರಲಾಯಿತು. ಅನೇಕ ಕಡೆ ಪುನೀತ್ ಅವರ ಪುತ್ಥಳಿಗಳು ತಲೆಯೆತ್ತಿವೆ. ಪುನೀತ್ ಅವರಿಗಾಗಿ ದೇವಸ್ಥಾನ ಕಟ್ಟಿದ ಉದಾಹರಣೆ ಕೂಡ ಇದೆ. ರಸ್ತೆ, ಸೇತು, ವಾರ್ಡ್ ಹೀಗೆ ಅನೇಕ ಕಡೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಇಷ್ಟೊಂದು ಪ್ರೀತಿ, ಅಭಿಮಾನ ತೋರುತ್ತಿರುವಾಗ ಆ ಗ್ರಾಮದಲ್ಲಿ ಬ್ಯಾನರ್ ಗಾಗಿ ಗಲಾಟೆ ನಡೆದು ಬಿಟ್ಟಿದೆ. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ
Advertisement
Advertisement
ಪುನೀತ್ ಜೀವಂತವಿರುವಾಗಲೇ ಯಾವತ್ತೂ ಬ್ಯಾನರ್ ಕಟ್ಟಿ, ಹಾಲಿನ ಅಭಿಷೇಕ ಮಾಡಿ ಎಂದು ಹೇಳಿದವರಲ್ಲ. ಎಷ್ಟೋ ಬಾರಿ ಆ ಹಣವನ್ನು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಕೊಡಿ ಎಂದು ಹೇಳಿದ್ದೂ ಇದೆ. ಆದರೆ, ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸುತ್ತಾ ಬಂದಿದ್ದಾರೆ. ಹಾಗೆಯೇ ಈ ಗ್ರಾಮದ ಅಭಿಮಾನಿಗಳು ಕೂಡ ಅದೇ ರೀತಿಯಲ್ಲಿ ಅಭಿಮಾನ ತೋರಿಸಿದ್ದಾರೆ. ಆದರೆ, ಅಲ್ಲೊಂದು ಯಡವಟ್ಟು ಆಗಿ ಬಿಟ್ಟಿದೆ. ಇದನ್ನೂ ಓದಿ: ಬಾಲಿವುಡ್ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್ ಮಾಡಿದ ʻಕೆಜಿಎಫ್ 2ʼ
Advertisement
ಭಾನುವಾರ (ಏ.17) ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಸಲುವಾಗಿ ಬೆಂಗಳೂರಿನ ಯಲಹಂಕದ ಅರಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರಾಪುರದಲ್ಲಿ ಗಲಾಟೆ ನಡೆದಿದ್ದು, ಊರಿಗ ಗ್ರಾಮಸ್ಥರು ಮತ್ತು ಅಪ್ಪು ಅಭಿಮಾನಿಗಳು ರಾಡ್ ಹಿಡಿದುಕೊಂಡು ಕೈ ಕೈ ಮಿಲಾಯಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸ್ ಸಮ್ಮುಖದಲ್ಲಿ ಬ್ಯಾನರ್ ತೆರೆವುಗೊಳಿಸಿದ್ದು, ಮತ್ತೆ ಬ್ಯಾನರ್ ಹಾಕುವಂತೆ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್
ಪುನೀತ್ ರಾಜ್ ಕುಮಾರ್ ಬ್ಯಾನರ್ ಅನ್ನು ಭೈರಾಪುರದಲ್ಲಿ ಹಾಕಲಾಗಿತ್ತು. ಅದು ಜನರಿಗೆ ಓಡಾಡಲು ತೊಂದರೆ ಮಾಡುತ್ತಿದೆ ಎನ್ನುವ ಕಾರಣಕ್ಕಾಗಿ ಪೋಸ್ಟರ್ ತಗೆಯುವಂತೆ ಗ್ರಾಮಸ್ಥರು ಕೇಳಿದ್ದಾರೆ. ಅದಕ್ಕೆ ಅಭಿಮಾನಿಗಳು ಒಪ್ಪಿಲ್ಲ. ಹೀಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.