ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ ಬೆನ್ನಲ್ಲೇ ಇಸಿಜಿ, ಹೃದಯಸಂಬಂಧಿ ಟೆಸ್ಟ್ ಗಳನ್ನು ಮಾಡಿಸಿಕೊಳ್ಳಲು ಜನ ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ.
Advertisement
ಪುನೀತ್ ರಾಜ್ ಕುಮಾರ್ ಸಾವು ಎಲ್ಲರನ್ನು ಆತಂಕಕ್ಕೆ ದೂಡಿದೆ. ಅಷ್ಟು ಆರೋಗ್ಯವಾಗಿದ್ದ ವ್ಯಕ್ತಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದು ಆತಂಕ ಹೆಚ್ಚು ಮಾಡಿದೆ. ಇದರಿಂದಾಗಿ ಬೆಂಗಳೂರಿನ ಜನ ಲ್ಯಾಬ್, ಆಸ್ಪತ್ರೆಗಳಿಗೆ ಬಂದು ಹೃದಯ ಸಂಬಂಧಿ ಟೆಸ್ಟ್‌ಗಳಿಗೆ ಒಳಗಾಗುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್
Advertisement
Advertisement
ಕೇವಲ ಒಂದು ವಾರದಲ್ಲಿ 50% ರಷ್ಟು ಮಂದಿ ಇಸಿಜಿ ಪರೀಕ್ಷೆಗೆ ಒಳಗಾಗಿದ್ದು, ಇದರಲ್ಲಿ 20% ರಿಂದ 30% ರಷ್ಟು ಜನರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆಗಳಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಆಸ್ಪತ್ರೆ ಹಾಗೂ ಲ್ಯಾಬ್‍ಗಳಲ್ಲಿ ಕ್ಯೂಗಟ್ಟಲೆ ಜನ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದರಿಂದ ತಜ್ಞರು ಸಮಸ್ಯೆಗಳಿದ್ದರೆ ಅಷ್ಟೇ ಪರೀಕ್ಷೆ ಮಾಡಿಸಿಕೊಳ್ಳಿ, ಸುಖಾಸುಮ್ಮನೆ ಆತಂಕ ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿಗೂ 46 ಸಂಖ್ಯೆಗೂ ಸಂಬಂಧವೇನು?
Advertisement