ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಸಿನಿಮಾ ಮಾ.14ರಂದು ರೀ ರಿಲೀಸ್‌ಗೆ ಸಿದ್ಧವಾಗಿದೆ. ಮಾ.17ರಂದು ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಮತ್ತೆ ‘ಅಪ್ಪು’ ಸಿನಿಮಾ ರೀ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ‘ಅಪ್ಪು’ ಸಿನಿಮಾ ಸಕ್ಸಸ್‌ನ ವಿಶೇಷ ವಿಡಿಯೋವೊಂದನ್ನು ಪುನೀತ್ ಪತ್ನಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಟಾಕ್ಸಿಕ್’ ಅದ್ಭುತವಾಗಿದೆ: ಯಶ್ ಕುರಿತು ಹಾಲಿವುಡ್ ಸ್ಟಂಟ್ ಮಾಸ್ಟರ್ ಗುಣಗಾನ
‘ಅಪ್ಪು’ 100ನೇ ದಿನದ ಸಂಭ್ರಮದ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಶೇರ್ ಮಾಡಿ, ‘ಅಪ್ಪು’ ಚಿತ್ರದ ಐತಿಹಾಸಿಕ ಶತದಿನೋತ್ಸವ ಸಮಾರಂಭದ ಯಶಸ್ಸನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಾ.14ರಂದು ರೀ ರಿಲೀಸ್ ಆಗುತ್ತಿರುವ ‘ಅಪ್ಪು’ ಚಿತ್ರದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ.
View this post on Instagram
ಇನ್ನೂ ‘ಅಪ್ಪು’ ಚಿತ್ರದ ಸಕ್ಸಸ್ ಕಾರ್ಯಕ್ರಮವು ಅಣ್ಣಾವ್ರು, ರಜನಿಕಾಂತ್ ಸಮ್ಮುಖದಲ್ಲಿ ನಡೆದಿತ್ತು. ಸಿನಿಮಾ ಗೆದ್ದ ಖುಷಿಯಲ್ಲಿ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಜೊತೆಯಾಗಿ ಹೆಜ್ಜೆ ಹಾಕಿದ್ದರು.
ಇನ್ನೂ ಪೂರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು.