Cinema
ರಾಯರ ಸನ್ನಿಧಿಯಲ್ಲಿ ಹಾಡು ಹೇಳಿ ಭಾವುಕರಾದ ಪುನೀತ್

ರಾಯಚೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ಮಠಕ್ಕೆ ಆಗಮಿಸಿ ನಟ ಪುನೀತ್ ರಾಜ್‍ಕುಮಾರ್ ರಾಯರ ದರ್ಶನ ಪಡೆದು ಪುನೀತರಾದರು.
ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಗುರು ವೈಭವೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನ ಸನ್ಮಾನಿಸಲಾಯಿತು. ಸನ್ಮಾನಕ್ಕೂ ಮುನ್ನ ವೇದಿಕೆಯಲ್ಲಿ ಕುಳಿತಿದ್ದ ಪುನೀತ್ ರಾಜ್‍ಕುಮಾರ್ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡು ಭಾವುಕರಾದರು.
ವೇದಿಕೆ ಮೇಲೆ ರಾಯರ ಹಾಡು ಹೇಳಿದ ಪುನೀತ್ ರಾಯರಿಗೆ ತಮ್ಮ ಭಕ್ತಿ ಸಮರ್ಪಿಸಿದರು. ಆರಾಧನಾ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಮೂರು ಹಾಡುಗಳನ್ನ ಹಾಡುವುದಾಗಿ ಹೇಳಿದರು.
ಡಾ.ರಾಜಕುಮಾರ್ ಅವರಿಗೆ ಮಂತ್ರಾಲಯದೊಂದಿಗೆ ಇದ್ದ ಅವಿನಾಭಾವ ಸಂಬಂಧದ ಬಗ್ಗೆ ಹೇಳಿದರು. ಭಾಗ್ಯವಂತರು ಚಿತ್ರವನ್ನ ಮಂತ್ರಾಲಯದಲ್ಲಿ ಚಿತ್ರಿಕರಿಸಿದ್ದನ್ನ ನೆನಪು ಮಾಡಿಕೊಂಡರು. ಮಂತ್ರಾಲಯಕ್ಕೆ ಹೆಚ್ಚು ಬಾರಿ ಬರದಿದ್ದರೂ ಇಲ್ಲಿನ ನೆನಪುಗಳು ಹಾಗೇ ಇವೆ ಅಂತ ಪುನೀತ್ ಹೇಳಿದರು.
