ಬೆಂಗಳೂರು: ಲಾಲ್ ಬಾಗ್ ನಾ ಫಲಪುಷ್ಪ ಪ್ರದರ್ಶನಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಗೆ ಅರ್ಪಿಸಿದ್ದ ಫ್ಲವರ್ ಶೋ ವೀಕ್ಷಣೆಗೆ ಜನ ಸಾಗರವೇ ಹರಿದು ಬಂದಿದೆ.
Advertisement
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಆಯೋಜನೆ ಮಾಡಿದ್ದ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಆಗಸ್ಟ್ 5ರಿಂದ 15ರ ವರೆಗೆ 10 ದಿನಗಳ ಕಾಲ ನಡೆದ ಫ್ಲವರ್ ಶೋಗೆ ಕಡೆಯ ದಿನವಾದ ಸೋಮವಾರ ದಾಖಲೆ ಮಟ್ಟದಲ್ಲಿ ಜನ ಸಾಗರ ಹರಿದು ಬಂದಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈ ‘ಪ್ರಣಯ ಪಕ್ಷಿ’ಗಳದ್ದೇ ಮಾತು
Advertisement
Advertisement
ಕೊರೋನಾ ಬಳಿಕ ಅದ್ಧೂರಿ ಆಗಿ ನಡೆದ ಮತ್ತು ಅಗಲಿದ ಕನ್ನಡ ನಾಡಿನ ಕರುನಾಡ ರತ್ನಗಳಾದ ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್‍ಗೆ ಈ ಬಾರಿ ಫ್ಲವರ್ ಶೋವನ್ನು ಅರ್ಪಿಸಲಾಗಿತ್ತು. ಹೀಗಾಗಿ ಫ್ಲವರ್ ಶೋ ವೀಕ್ಷಿಸಲು ಕಳೆದ 2 ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಜನಸ್ತೋಮವೇ ಆಗಮಿಸಿ ಹೂವಿನ ಲೋಕವನ್ನು ಕಣ್ತುಂಬಿಕೊಂಡಿದ್ದಾರೆ. ಹೂವಿನ ಲೋಕಕ್ಕೆ ಮರಳಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತೋಷ ಪಟ್ಟಿದ್ದಲ್ಲದೇ, ಕರುನಾಡ ರತ್ನ, ನಗುವಿನ ಒಡೆಯ ಡಾ.ಪುನೀತ್ ರಾಜ್‍ಕುಮಾರ್ ರನ್ನು ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
Advertisement
ಕಳೆದ 10 ದಿನಗಳ ಕಾಲ ನಡೆದ ಈ ಪ್ಲವರ್ ಶೋ ವೀಕ್ಷಣೆಗೆ ಸುಮಾರು 10 ಲಕ್ಷ ಕ್ಕೂ ಹೆಚ್ಚು ಜನ ಆಗಮಿಸಿದ್ದಾರಂತೆ. ಇಷ್ಟು ಪ್ರಮಾಣದಲ್ಲಿ ಜನ ಬಂದಿರೋದು ಇದೇ ಮೊದಲು. ಈ ಬಾರಿಯ ಫ್ಲವರ್ ಶೋನಿಂದ ತೋಟಗಾರಿಕೆ ಇಲಾಖೆಗೆ ಬರೋಬ್ಬರಿ 3.36 ಕೋಟಿ ಆದಾಯ ಬಂದಿದೆಯಂತೆ. ಒಟ್ಟಾರೆ 10 ದಿನಗಳ ಫ್ಲವರ್ ಶೋಗೆ ಅದ್ದೂರಿಯಾಗಿ ತೆರೆ ಬಿದ್ದಿದ್ದು ನಗುವಿನ ದೊರೆಗಳಾದ ಡಾ.ರಾಜ್, ಅಪ್ಪುವನ್ನು ಹೂವಿನಲ್ಲಿ ಕಂಡು ಹೂವಿನ ಪ್ರೇಮಿಗಳು ಖುಷಿಯಾಗಿದ್ದಾರೆ.