– 1984ರಲ್ಲಿಯೇ ನಮ್ಮ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು
– ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇವೆ
ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಐಟಿ ರೇಡ್ ಶುಕ್ರವಾರ ರಾತ್ರಿ 11.30ಕ್ಕೆ ಅಂತ್ಯವಾಗಿದ್ದು, ಈ ಬಗ್ಗೆ ಮೊದಲ ಬಾರಿಗೆ ನಟ ಪುನೀತ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತೆರಿಗೆ ಇಲಾಖೆ ಅವರು ಬಂದು ನಮ್ಮ ಮನೆಯನ್ನು ರೇಡ್ ಮಾಡಿದ್ದಾರೆ. ನಾವು ನಾಗರಿಕರಾಗಿ ಅವರಿಗೆ ಸಹಕರಿಸಬೇಕು. ಈಗ ರೇಡ್ ಮುಗಿದಿದ್ದು, ಅದರ ಪ್ರಕ್ರಿಯೆ ಇನ್ನೂ ಒಂದು ಗಂಟೆ ನಡೆಯುತ್ತದೆ. ನಾವು ಅವರಿಗೆ ಏನು ತೊಂದರೆ ಕೊಟ್ಟಿಲ್ಲ. ಅದೇ ರೀತಿ ಅವರು ಕೂಡ ನಮಗೆ ಯಾವುದೇ ರೀತಿಯ ತೊಂದರೆ ಮಾಡಿಲ್ಲ. ತೆರಿಗೆ ಇಲಾಖೆಗೆ ನಾಗರಿಕರಾಗಿ ಸಹಕರಿಸಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂತಿಮ ಹಂತಕ್ಕೆ ತಲುಪಿದ ಪುನೀತ್, ಶಿವಣ್ಣ ಮನೆ ರೇಡ್
Advertisement
Advertisement
ಯಾರೇ ಆಗಲಿ ಅವರ ಅಕೌಂಟ್ ವಿಚಾರದಲ್ಲಿ ವ್ಯತ್ಯಾಸ ಕಂಡು ಬಂದರೆ ತೆರಿಗೆ ಇಲಾಖೆ ಅವರು ರೇಡ್ ಮಾಡುತ್ತಾರೆ. ಅವರಿಗೆ ಬಂದಿದ್ದ ಮಾಹಿತಿ ಮೇರೆಗೆ ನಮ್ಮ ಮನೆಯ ಮೇಲೆ ರೇಡ್ ಮಾಡಿದ್ದಾರೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾವು ಸಂಪೂರ್ಣವಾಗಿ ಉತ್ತರ ಕೊಟ್ಟಿದ್ದೇವೆ. ನಮ್ಮ ಮನೆಯ ಮೇಲೆ 1984ರಲ್ಲಿ ಚೆನ್ನೈ, ಬೆಂಗಳೂರು ಮತ್ತು ನಮ್ಮ ಫಾರ್ಮ್ ಹೌಸ್ ನಲ್ಲಿ ನಡೆದಿತ್ತು. ಅದೇ ರೀತಿ ಈಗಲೂ ಮಾಡಿದ್ದಾರೆ ಅಷ್ಟೇ ಎಂದು ಪುನೀತ್ ಐಟಿ ದಾಳಿಯ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿದ ಪುನೀತ್
Advertisement
ಇಂದು ಹುಬ್ಬಳ್ಳಿಯಲ್ಲಿ ಪುನೀತ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ ಸುಮಾರು 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
Advertisement
ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಮತ್ತು ಪವನ್ ವಡೆಯರ್ ಅವರ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ. ಹೀಗಾಗಿ ಧ್ವನಿ ಸುರುಳಿ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಕಾರ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಹುಬ್ಬಳ್ಳಿಯ ಜನತೆ ಕಾದು ಕುಳಿತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv