ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿಗೆ ಇಂದು ಕುಟುಂಬಸ್ಥರು ಪೂಜೆ ಸಲ್ಲಿಸಿದರು.
Advertisement
ಪುನೀತ್ ನಿಧನರಾಗಿ ಇಂದಿಗೆ 5ನೇ ದಿನವಾಗಿದ್ದು, ನಗರದ ಕಂಠೀರವ ಸ್ಟುಡಿಯೋಗೆ ಸದಾಶಿವನಗರದಿಂದ 4 ಬಸ್‍ಗಳಲ್ಲಿ ಕುಟುಂಬಸ್ಥರು ಆಗಮಿಸಿದ್ದರು. ಅಪ್ಪು ಸಮಾಧಿಗೆ ಹೂವಿನಿಂದ ಅಲಂಕಾರಗೊಳಿಸಿ, ಅವರಿಗೆ ಇಷ್ಟವಾದಂತಹ ಕಪ್ ಕಡುಬು, ಬಿರಿಯಾನಿ, ನಾಟಿಕೋಳಿ ಸಾರು ಸೇರಿದಂತೆ ಹಲವಾರು ಬಗೆ ಬಗೆಯ ಪದಾರ್ಥಗಳನ್ನು ಮನೆಯಿಂದಲೇ ಮಡಿಯಾಗಿ ಮಾಡಿಕೊಂಡು ಬಂದು ಬಾಳೆ ಎಲೆಯಲ್ಲಿಟ್ಟು ಬಡಿಸಿ, ಹಾಲು, ತುಪ್ಪ ಕಾರ್ಯ ನೆರವೇರಿಸಿದರು. ಇದನ್ನೂ ಓದಿ: ಪುನೀತ್ ಬಗ್ಗೆ ಅಶ್ಲೀಲವಾಗಿ ಪೋಸ್ಟ್ – ವ್ಯಕ್ತಿ ಅರೆಸ್ಟ್
Advertisement
Advertisement
ಇದೇ ವೇಳೆ ಪುನೀತ್ ಸಮಾಧಿಗೆ ಪೂಜೆ ಮಾಡಿ ನಮಸ್ಕರಿಸಿದ ಅಶ್ವಿನಿ ಪುನೀತ್ ಹಾಗೂ ಮಕ್ಕಳು ಸಮಾಧಿ ಕಡೆ ನೋಡುತ್ತಾ ಭಾವುಕರಾದರು. ನಂತರ ಇಹಲೋಕ ತ್ಯಜಿಸಿದ ಸಹೋದರನಿಗೆ ಭಗವಂತನಲ್ಲಿ ಮುಕ್ತಿ ಬೇಡಿ ಭಜನೆ ಮಾಡುತ್ತಾ ರಾಘವೇಂದ್ರ ರಾಜ್ ಕುಮಾರ್ ಅವರು ಪೂಜೆಸಲ್ಲಿಸಿದರು. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್
Advertisement
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರ್ಷಗಳು ಕಳೆಯುತ್ತಲೇ ಇರುತ್ತದೆ. ಈ ನೋವಿನ ಜೊತೆ ಬದುಕುವ ಶಕ್ತಿ ಕೊಡು ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ಈ ಎಲ್ಲದರ ನಡುವೆ ಹೇಗೆ ಬದುಕಬೇಕು ಅಂತ ತಿಳಿಯಬೇಕಾಗಿದೆ. ನನ್ನ ತಂದೆಗೆ ದೇವರು 75 ವರ್ಷ ಆಯಸ್ಸು ಕೊಟ್ಟ. ಪುನೀತ್‍ಗೆ 45 ವರ್ಷ ಕೊಟ್ಟ. 75 ವರ್ಷದ ಕಡಿಮೆ ಸಮಯದಲ್ಲೇ ಎಲ್ಲವನ್ನು ಮಾಡಲಾಗಿದೆ. ಇದನ್ನೂ ಓದಿ: ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ
ನಮಗೆ ಅವಕಾಶ ಕೊಟ್ಟಿದು ಇಷ್ಟೇ. ಅಪ್ಪು 2 ಕಣ್ಣುಗಳನ್ನು ನಾಲ್ಕು ಜನ ನೋಡುತ್ತಿದ್ದಾರೆ. ಅಪ್ಪಾಜಿ 2 ಕಣ್ಣು ಇಬ್ಬರಿಗೆ ನೀಡಿದ್ರೆ. ಅಪ್ಪು ಈಗ 4 ಜನರಿಗೆ ಕಣ್ಣು ನೀಡಿ ದಾಖಲೆ ಮಾಡಿದ್ದಾನೆ. ಇದು ಅಪ್ಪು ಸಾಧನೆಯಾಗಿದೆ. ನ್ಯೂಸ್ ಬಂದಾಗಿನಿಂದ ನಮ್ಮ ಜೊತೆ ಇದ್ದ ಅಭಿಮಾನಿ, ಸರ್ಕಾರ ಹಾಗೂ ಸಿಎಂಗೆ ಧನ್ಯಾವಾದಗಳು. ಸಿಎಂ ಅವರಿಗೆ ಎಷ್ಟೇ ಕೃತಜ್ಞತೆ ಹೇಳಿದರೂ ಚಿಕ್ಕದು. ಅವರು ನಮ್ಮ ಕುಟುಂಬದ ಮೇಲೆ ಪ್ರಾಣ ಇಟ್ಟಿದ್ದಾರೆ. ಅದಕ್ಕೆ ನಾನು ಋಣಿಯಾಗಿರುತ್ತೇನೆ ಎಂದರು.