ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ನಟ ಜಗ್ಗೇಶ್ ಭಾವನಾತ್ಮಕ ಸಾಲುಗಳನ್ನು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಪುನೀತ್ ನಿನ್ನ 30ವರ್ಷದ ಒಡನಾಟ ಹೇಗೆ ಮರೆಯಲಿ ಬಂಧುವೆ. ಅಪ್ಪ ನನ್ನನ್ನು ನಿನಗೆ ಪರಿಚಯಿಸಿದಾಗ ನಿನ್ನ ಆಶ್ಚರ್ಯದ ಮುದ್ದು ಮುಖ ಹೇಗೆ ಮರೆಯಲಿ? ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ನನಗೆ ಕರೆಮಾಡಿ ಹರಸುತ್ತಿದ್ದ ನಿನ್ನ ಗುಣ ಹೇಗೆ ಮರೆಯಲಿ? ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ? ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ ಎಂದು ಪ್ರಶ್ನೆ ಮಾಡುತ್ತಾ ಜಗ್ಗೆಶ್ ಅವರು ಅಪ್ಪು ಇನ್ನಿಲ್ಲ ಎನ್ನುವ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು
ವಾರದ ಹಿಂದೆ ಮಲ್ಲೇಶ್ವರಕ್ಕೆ ಬಂದಿರುವೆ ಬಾಅಣ್ಣ ಎಂದು ಕರೆದು1ಘಂಟೆ ಸಮಯಕಳೆದ ಆತ್ಮೀಯ ತಮ್ಮ ಪುನೀತ ಇಂದಿಲ್ಲಾ ಎಂದರೆ ಎಂಥ ದುರ್ವಿಧಿ! ಕೋಟ್ಯಾಂತರ ಅಭಿಮಾನಿಗಳು ಅವರ ಮನೆಯವರಿಗೆ ಈನೋವು ಬರಿಸುವ ಶಕ್ತಿ ಆದೇವರೆ ನೀಡಬೇಕು!ಕನ್ನಡ ಚಿತ್ರರಂಗದ ಅನರ್ಘ್ಯರತ್ನ ಹೇಳದೆಕೇಳದೆ ನಿರ್ಗಮಿಸಿ ಅಪ್ಪಅಮ್ಮನ ಮಡಿಲು ಸೇರಿತು!ನಿಮ್ಮಆತ್ಮಕ್ಕೆ
ಚಿರಶಾಂತಿ???????? pic.twitter.com/V8rxFcXYNA
— ನವರಸನಾಯಕ ಜಗ್ಗೇಶ್ (@Jaggesh2) October 29, 2021
ಆನಂದರಾಮ ನನಗಾಗಿ ನಿರ್ದೇಶನ ಮಾಡುವ ಚಿತ್ರದ ಕಥೆ ಕೇಳಿ ನೀನು ನಗುತ್ತಿದ್ದ ಆ ನಗು ಮುಖ ಹೇಗೆ ಮರೆಯಲಿ? ಮಗ ಗುರುರಾಜನ ಚಿತ್ರಕ್ಕೆ ಶುಭ ಹಾರೈಸಿ, ಮಗನಿಗೆ ಭುಜ ತಟ್ಟಿದ ದಿನ ಹೇಗೆ ಮರೆಯಲಿ? ನಿನ್ನ ತಂದೆಯ ದ್ವನಿ ಅನುಕರಣೆ ಮಾಡಿದಾಗ ನೀ ಮಗುವಂತೆ ನಗುತ್ತಿದ್ದ ಆ ಮುದ್ದು ಮುಖ ಹೇಗೆ ಮರೆಯಲಿ? ಕೇವಲ ವಾರದ ಹಿಂದೆ ಅಣ್ಣ ಮಲ್ಲೇಶ್ವರಕ್ಕೆ ಬಂದಿರುವೆ ಬನ್ನಿ ಎಂದು ಕರೆದು ನನ್ನ ನಿನ್ನ ಬದುಕಿನ ಕಡೆಯ ಬೇಟಿ ಹೇಗೆ ಮರೆಯಲಿ. ಪ್ರೀತಿಯ ಆತ್ಮವೇ ಹೋಗಿ ಬಾ ಎಂದು ಹೇಳಲು ನನಗೆ ಮನಸ್ಸು ಒಪ್ಪುತ್ತಿಲ್ಲ. ನನ್ನ ಕಡೆ ಉಸಿರಿನವರೆಗು ನಿನ್ನ ನೆನಪು ಒಡನಾಟ ನನ್ನಮನದಲ್ಲಿ ಉಳಿಸಿಕೊಳ್ಳುವೆ ನಿನ್ನ ಆತ್ಮ ಎಲ್ಲೆ ಇರಲಿ ಶಾಂತಿಯಿಂದ ಉಳಿಯಲಿ ಲವ್‍ಯೂ ಚಿನ್ನ ಎಂದು ಭಾರದ ಮನಸ್ಸಿನಿಂದ ಬರೆದು ಸಂತಾಪ ವ್ಯಕ್ತಪಡಿಸಿದ್ದಾರೆ.
ಮರೆಯಲಾಗದ ದಿನ..
ಸಂತೋಷ್ ಜೀ ರವರು ಪುನೀತ್ ಬೇಟಿ ಮಾಡಬೇಕೆಂದು ತಿಳಿಸಿದಾಗ ಪುನೀತ್ ಗೆ ಕರೆಮಾಡಿ ವಿಷಯ ತಿಳಿಸಿದೆ ಮಗುವಂತೆ ಕಾದು ಕುಳಿತು ಜೀ ರವರ ಜೊತೆ ಸಮಯ ಕಳೆದು ಮನಬಿಚ್ಚಿ ಮಾತಾಡಿದ ಕ್ಷಣ..
"ನಿನ್ನ ಮಗುವಿನಂತಹ ನಗು ನನ್ನ ಹೃದಯದಲ್ಲಿ ಅಚ್ಚಾಗಿದೆ????@blsanthosh @Srinidhibandri pic.twitter.com/KI1qmHpZsT
— ನವರಸನಾಯಕ ಜಗ್ಗೇಶ್ (@Jaggesh2) October 29, 2021
ಚಂದನವನದ ಚಂದದ ನಟ ಪುನೀತ್‍ರಾಜ್ ಕುಮಾರ್ (46) ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ. ಸ್ಯಾಂಡ್‍ವುಡ್‍ನ ಅನೇಕ ಹಿರಿಯ ಕಿರಿಯ ಕಲಾವಿದರು ಅಪ್ಪು ನಿಧನಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಪ್ಪು ಅಗಲಿಕೆಗೆ ಕಂಬನಿ ಮೀಡಿಯುತ್ತಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನನ್ನು ನೋಡಲು ಬೇಗ ಹೋಗಿದ್ದಾನೆ: ರಾಘವೇಂದ್ರ ರಾಜ್ ಕುಮಾರ್