ಬೆಂಗಳೂರು: ಅತ್ಯಂತ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಮೇರು ನಟನನ್ನು ಕರ್ನಾಟಕ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು.
Advertisement
ಹೃದಯಾಘಾತದಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್‍ಕುಮಾರ್ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ನಿಜಕ್ಕೂ ಇದೊಂದು ಆಘಾತಕಾರಿ ಸುದ್ದಿ. ಅತ್ಯಂತ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಮೇರು ನಟನನ್ನು ಕರ್ನಾಟಕ ಕಳೆದುಕೊಂಡಿದೆ. ಅವರ ಕುಟುಂಬ ಹಾಗೂ ಇಡೀ ಕರ್ನಾಟಕದ ಜನ ದುಃಖದಲ್ಲಿದ್ದಾರೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಪ್ರೀತಿಯ ಅಪ್ಪು ಇನ್ನಿಲ್ಲ
Advertisement
ಪುನೀತ್ ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ದರು. ನವೆಂಬರ್ 1ಕ್ಕೆ ವೆಬ್‍ಸೈಟ್‍ವೊಂದನ್ನು ಉದ್ಘಾಟನೆ ಮಾಡುವ ಸಂಬಂಧ ನಿನ್ನೆ ನನ್ನೊಂದಿಗೂ ಮಾತನಾಡಿದ್ದರು. ನಾನು ಅವರನ್ನು ಭೇಟಿಯಾಗಲು ಆಗಲಿಲ್ಲ. ಡಾ.ರಾಜ್‍ಕುಮಾರ್ ಅವರ ಸಂಸ್ಕಾರದಲ್ಲಿ ಪುನೀತ್ ಬೆಳೆದಿದ್ದರು. ತಂದೆಯಂತೆಯೇ ವಿನಯವಂತ. ನನಗೂ ರಾಜ್‍ಕುಮಾರ್ ಕುಟುಂಬಕ್ಕೂ ಹಳೆಯ ಬಾಂಧವ್ಯವಿದೆ. ಅಪ್ಪುನನ್ನು ಸಣ್ಣವಯಸ್ಸಿನಿಂದಲೂ ನೋಡಿದ್ದೇನೆ. ಬಹಳ ಎತ್ತರಕ್ಕೆ ಬೆಳೆದಿದ್ದ, ಇನ್ನೂ ಉಜ್ವಲ ಭವಿಷ್ಯವಿತ್ತು. ಅಪ್ಪು ಅಗಲಿಕೆಯಿಂದ ಕಲಾರಂಗಕ್ಕೆ ದೊಡ್ಡ ಪ್ರಮಾಣದ ನಷ್ಟವುಂಟಾಗಿದೆ. ಚಿತ್ರರಂಗದಲ್ಲಿ ನಾಯಕತ್ವದ ಗುಣವುಳ್ಳಂತಹ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ದುಃಖಿಸಿದರು. ಇದನ್ನೂ ಓದಿ: ತಂದೆ ಹಾದಿ ಹಿಡಿದ ಮಗ- ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಅಪ್ಪು
Advertisement
ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಸೂಕ್ತ ವ್ಯವಸ್ಥೆಯೊಂದಿಗೆ ಅವಕಾಶ ಮಾಡಿಕೊಡಲಾಗುವುದು. ಯಾರೂ ಸಹ ಅತಿಯಾದ ಭಾವನೆಗೆ ಒಳಗಾಗದೇ, ಸಂಯಮ ಕಳೆದುಕೊಳ್ಳದೆ ಶಾಂತಿಯಿಂದ ವರ್ತಿಸಬೇಕು. ಶಾಂತಿ, ಸುವ್ಯವಸ್ಥೆಯಿಂದ ಪುನೀತ್ ರಾಜ್‍ಕುಮಾರ್‍ರನ್ನು ಬೀಳ್ಕೊಡೋಣ. ಆಗ ಮಾತ್ರ ನಿಜವಾಗಿಯೂ ನಾವು ಅವರಿಗೆ ಸಲ್ಲಿಸುವ ಗೌರವವಾಗುತ್ತದೆ ಎಂದು ಮನವಿ ಮಾಡಿದರು.
Advertisement
Shocked and deeply saddened as Karnataka's most loved superstar #PuneetRajkumar is no longer with us.
A huge personal loss and one that's difficult to come to terms with.
Praying the almighty gives the Rajkumar family and fans the strength to bear this loss.#OmShanti pic.twitter.com/QpF63vKvIO
— Basavaraj S Bommai (@BSBommai) October 29, 2021