ಕನ್ನಡದ ‘ಗೂಗ್ಲಿ’ ನಟಿ ಕೃತಿ ಕರಬಂಧ (Kriri Kharbanda) ಅವರು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ (Pulkit Samrat) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 15ರಂದು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ
ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಕೃತಿ ಕಂಗೊಳಿಸಿದ್ರೆ, ಉಸಿರು ಬಣ್ಣದ ಉಡುಗೆಯಲ್ಲಿ ಪುಲ್ಕಿತ್ ಹೈಲೆಟ್ ಆಗಿದ್ದಾರೆ. ನವಜೋಡಿಗೆ ಬಾಲಿವುಡ್ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು.
ನಿನ್ನೆ ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆದಿದೆ.
ಗ್ರ‍್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿತ್ತು.