Bengaluru CityDistrictsKarnatakaLatestMain Post

ವೆಡ್ಡಿಂಗ್ ಗಿಫ್ಟ್ ಸಿನಿಮಾ ಮೂಲಕ ಪ್ರೇಮಾ ಪುನರಾಗಮನ

-ಲಾಯರ್ ಅವತಾರದಲ್ಲಿ ಪ್ರೇಮಾ ಹಂಗಾಮ

Advertisements

ರೆಗ್ಯೂಲರ್ ಕಥೆಯನ್ನು ಹೊರತುಪಡಿಸಿ ಸಮಾಜದಲಿ ನಡೆಯುವ ಸೂಕ್ಷ್ಮ ಕಥೆಯ ಎಳೆಯನ್ನು ಒಳಗೊಂಡಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾ ಬಿಡುಗಡೆ ಹಂತದಲ್ಲಿದೆ. ಇದೇ ಜುಲೈ 8ರಂದು ಥಿಯೇಟರ್ ಅಂಗಳಕ್ಕೆ ಚಿತ್ರ ಎಂಟ್ರಿ ಕೊಡುತ್ತಿದೆ. ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದಿಂದಲೂ ಕುತೂಹಲದ ಕೇಂದ್ರ ಬಿಂದುವಾಗಿರುವ ವೆಡ್ಡಿಂಗ್ ಗಿಫ್ಟ್ ಮೂಲಕ ವಿಕ್ರಂ ಪ್ರಭು ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ವಿಕ್ರಂ ಪ್ರಭು ನೈಜ ಘಟನಾವಳಿಗಳನ್ನಾಧರಿಸಿ, ದಾಂಪತ್ಯ ಜೀವನದಲ್ಲಿರುವ ಸಮಸ್ಯೆಗಳ ಎಳೆಯನ್ನಿಟ್ಟುಕೊಂಡು ವೆಡ್ಡಿಂಗ್ ಗಿಫ್ಟ್ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ತನ್ನ ರಕ್ಷಣೆಗೆ ಇರುವ ಕಾನೂನುಗಳನ್ನು ಹೆಣ್ಣು ದುರ್ಬಳಕೆ ಮಾಡಿಕೊಂಡು ತನ್ನ ಗಂಡನನ್ನೆ ಹೇಗೆಲ್ಲಾ ಕಷ್ಟದ ಕೂಪಕ್ಕೆ ತಳುತ್ತಾರೆ ಎಂಬ ಕೋರ್ಟ್ ರೂಮ್ ಡ್ರಾಮಾ ಹೊಂದಿರುವ ಕ್ರೈಂ ಥ್ರಿಲ್ಲರ್ ಜಾನರ್ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ಪ್ರೇಮಾ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ಕಿಡಿಪ್‍ನಲ್ಲಿ ಗೆದ್ದರೂ, ಸೋತರೂ ಅಳುತ್ತೇನೆ ನಾನ್ಯಾರು ಬಲ್ಲಿರಾ!? – ನಾನೇ ಲಕ್ಕಿಡಿಪ್ ಸಿಎಂ ಹೆಚ್‍ಡಿಕೆ: ಬಿಜೆಪಿ

90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಪ್ರೇಮಾ ವಿವಾಹದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಉಪೇಂದ್ರ ಮತ್ತೆ ಬಾ ಸಿನಿಮಾದಿಂದ ಕಮ್ ಬ್ಯಾಕ್ ಮಾಡಿದ್ದ ಪ್ರೇಮಾ, ಈ ಸಿನಿಮಾ ಆದ ಮೇಲೆ ಮತ್ತೆ ಯಾವ ಚಿತ್ರದಲ್ಲೂ ನಟಿಸಲಿಲ್ಲ. ಇದೀಗ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇದನ್ನೂ ಓದಿ: ನೋಡಲ್ಲ ಅಂದ್ರೆ ಮುಖ ನೋಡಲ್ಲ, ಮಾತಾಡಲ್ಲ ಅಂದ್ರೆ ಮಾತಾಡಲ್ಲ ಅಷ್ಟೇ – ಇದು ಸಿದ್ದು ವರಸೆ

ಸದಾ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಾ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ಪ್ರೇಮಾ ಅವರನ್ನು ಇಂಡಸ್ಟ್ರಿಗೆ ಕರೆತರಲು ಒಂದಷ್ಟು ಸಿನಿಮಂದಿ ದುಂಬಾಲು ಬಿದ್ದಿದ್ದರು. ಆದರೆ ತಾವು ಹೊಸತನದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಹಾಜರಾಗಬೇಕೆಂಬ ಇಚ್ಛೆ ವ್ಯಕ್ತಪಡಿಸುತ್ತಿದ್ದ ಪ್ರೇಮಾಗೆ ವೆಡ್ಡಿಂಗ್ ಗಿಫ್ಟ್ ಬಳಗ ಒಂದೊಳ್ಳೆ ಪಾತ್ರ ನೀಡಿದೆ. ಖಡಕ್ ಲಾಯರ್ ಆಗಿ ವಾದ ನಡೆಸುವ ಪ್ರೇಮಾಗೆ ತುಂಬಾನೇ ಇಷ್ಟಪಟ್ಟು ಪಾತ್ರ ಮಾಡಿದ್ದಾರೆ. ಪ್ರೇಕ್ಷಕರಿಗೂ ಲಾಯರ್ ಪ್ರೇಮಾ ಖಂಡಿತ ಇಷ್ಟವಾಗುತ್ತಾರೆ ಎನ್ನುವುದು ಚಿತ್ರತಂಡ ಅಭಿಪ್ರಾಯ.

Live Tv

Leave a Reply

Your email address will not be published.

Back to top button