– ನಾನು ಕಂಪ್ಲೆಂಟ್ ಕೊಟ್ರೆ ಬೆಂಕಿ ಹೊತ್ತಿಕೊಳ್ಳುತ್ತೆ
– 2,000 ಜನ ಕಾಲ್ ಮಾಡಿ ದೂರು ಕೊಡು ಅಂದ್ರು; ಪ್ರಥಮ್
ಬೆಂಗಳೂರು: ತನಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದ ನಟ ಪ್ರಥಮ್ (Actor Pratham), ದರ್ಶನ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಪ್ರಥಮ್ ಕೊಲೆ ಆರೋಪಿ ನಟ ದರ್ಶನ್ ಮತ್ತವರ ಅಭಿಮಾನಿಗಳಿಗೆ (Darshan Fans) ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ನಮಗೂ ಅಭಿಮಾನಿಗಳಿದ್ದಾರೆ ಸರ್
ದರ್ಶನ್ ಸರ್, ಒಳ್ಳೆಯವ್ರ ಸಹವಾಸ ಇಟ್ಕೊಳ್ಳಿ. ನಿಮ್ಗೆ ಪ್ರೀತಿಯಿಂದ ಹೇಳ್ತಿದಿನಿ ದರ್ಶನ್ (Darshan) ಸರ್. ನಿಮ್ ಹುಡುಗರಿಗೆ ಹೇಳಿ. ನಿಮ್ಗೆ ಫ್ಯಾನ್ಸ್ ಇರುವಂತೆ ನಮಗೂ ಇದ್ದಾರೆ ಸರ್, ನಾವು ಪ್ರೀತಿ ಗಳಿಸಿದ್ದೀವಿ ಸರ್. ದರ್ಶನ್ ಜೊತೆ ಇದ್ದವ್ರು ಯೋಗ್ಯರು ಇರಬೇಕು. ನಮ್ಗೆ ಸಮಸ್ಯೆ ಆದ್ರೆ ಸುಮ್ಮನೆ ಇರಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ ಪ್ರಥಮ್. ಇದನ್ನೂ ಓದಿ: ಏಯ್.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್ ವಾರ್ನಿಂಗ್
ದೇವಸ್ಥಾನದಲ್ಲಿ ಕೆಲವರು ಮಾರಾಕಾಸ್ತ್ರಗಳನ್ನ ಇಟ್ಕೊಂಡಿದ್ರು. ಅಲ್ಲಿಯೇ ರಕ್ಷಕ್ ಕೂಡ ಇದ್ರು. ಎಸ್ಪಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ಅವ್ರು ತನಿಖೆ ಮಾಡ್ತಾರೆ. ಆದ್ರೆ ಪ್ರೀತಿಯಿಂದ ಹೇಳ್ತಿದಿನಿ ಸರ್. ನಮ್ಮ ತಂಟೆಗೆ ಬರೋದು ಬೇಡ. ನಿಮ್ಮ ಹುಡ್ಗುರುಗಳಿಗೆ ಹೇಳಿ ಅಂತ ದರ್ಶನ್ ಅಭಿಮಾನಿಗಳಿಗೆ ಹೇಳಿ ಅಂತ ವಿನಯದಿಂದಲೇ ಡಿಚ್ಚಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್
2,000 ಜನ ಫೋನ್ ಮಾಡಿ ಕಂಪ್ಲೆಂಟ್ ಕೊಡಿ ಅಂದ್ರು
ಡ್ರ್ಯಾಗರ್ ಹಿಡಿದು ಬಂದವರು ನಮ್ಮ ಬಾಸ್ ಬಗ್ಗೆ ಮಾತನಾಡಬೇಡಿ ಅಂತ ಹೇಳಿದ್ದು ನಿಜ. ಎಸ್ಪಿಗೆ ಹೇಳಿದ್ದೀನಿ, ತನಿಖೆ ಮಾಡ್ತಿದ್ದಾರೆ. ನಾನು ಯಾರ ಹೆಸರನ್ನು ಹೇಳಲ್ಲ. ಜನ ಪ್ರೀತಿ ಕೊಟ್ಟಾಗ ಪ್ರೀತಿಯಿಂದ ನಡೆದುಕೊಳ್ಳಬೇಕು. ನಾನು ಯಾರ ಹೆಸರನ್ನೂ ಯಾಕೆ ಹೇಳ್ತಿಲ್ಲ ಅಂದ್ರೆ, ಅವರ ಮೇಲೆ ಗೌರವ ಇದೆ. 2,000 ಜನ ಫೋನ್ ಮಾಡಿ ಕಂಪ್ಲೆಂಟ್ ಕೊಡಿ ಅಂತ ಹೇಳಿದ್ರು. ದೂರು ಕೊಟ್ಟರೆ ಬೆಂಕಿ ಹೊತ್ತಿಕೊಳ್ಳುತ್ತೆ ಅಂತ ಹೇಳಿದ್ದಾರೆ. ಇದನ್ನೂ ಓದಿ: Exclusive | ರೇಣುಕಾಸ್ವಾಮಿ ಕೇಸ್ – ʻಡಿ ಬಾಸ್ʼ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಕೆಂಡ
ಎಚ್ಚೆತ್ತುಕೊಳ್ಳಿ
ಮುಂದುವರಿದು… ಇಂತಹ ಗೂಂಡಾಗಳನ್ನ ಯಾಕೆ ಸಾಕುತ್ತೀರಾ? ಮನೆಯಲ್ಲಿ ನಾಯಿ ಸಾಕಿ, ಬೆಕ್ಕು, ಗಿಳಿ, ಪಾರಿವಾಳ ಸಾಕಿ, ಇದೆಲ್ಲ ಬೇಡ. ಕಲಾವಿದರು ಕಲಾವಿದರಾಗಿಯೇ ಇರಿ. ನಿಮ್ಮ ಹೆಸರು ದುರ್ಬಳಕೆ ಆಗ್ತಿದೆ ಅಂದಾಗ ಎಚ್ಚೆತ್ತುಕೊಳ್ಳಿ ಅಂತ ದರ್ಶನ್‌ಗೆ ನೇರ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್
ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡೊಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.