ಬೆಂಗಳೂರು: ಬಿಗ್ ಬಾಸ್ ಪ್ರಥಮ್ ಅಂದರೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ನಟಿಯೊಬ್ಬರ ಜೊತೆ ಕಾಪ್ಟರ್ ನಲ್ಲಿ ಓಡಾಡುತ್ತಿದ್ದಾರೆ.
ಪ್ರಥಮ್ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ `ನಟ ಭಯಂಕರ’ ಚಿತ್ರಕ್ಕಾಗಿ ಕಾಪ್ಟರ್ ಬಳಕೆ ಮಾಡುತ್ತಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಶೂಟಿಂಗ್ ಶುರುವಾಗಿದ್ದು, ಪ್ರಥಮ್ ಜೊತೆಯಲ್ಲಿ ನಟಿ ಸಹೇರಾ ಆಫ್ಟಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
Advertisement
ನಟಿ ಸಾಹೇರ್ ಅಫ್ಜಾ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಸ್ಯಾಂಡಲ್ ವುಡ್ ನಲ್ಲಿ ಆಫರ್ ಗಳ ಸುರಿಮಳೆಯನ್ನು ಪಡೆದಿದ್ದಾರೆ. ಸಾಹೇರ್ ಅಫ್ಜಾ ಸ್ಯಾಂಡಲ್ ವುಡ್ ನಲ್ಲಿ ಬೀಗ ಸಿನಿಮಾದಿಂದ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈಗ ಕನ್ನಡದಲ್ಲಿ 3 ಸಿನಿಮಾಗಳ ಬಂಪರ್ ಆಫರ್ ಪಡೆದಿದ್ದು, ಸಿನಿಮಾಗೆ ಸಹಿ ಹಾಕುತ್ತಿದ್ದಂತೆ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ.
Advertisement
ಸದ್ಯಕ್ಕೆ ಒಳ್ಳೆ ಹುಡುಗ ಪ್ರಥಮ್ ಜೊತೆ `ನಟ ಭಯಂಕರ’ ಸಿನಿಮಾದ ಶೂಟಿಂಗ್ ನಲ್ಲಿ ಸಾಹೇರ್ ಅಫ್ಜಾ ಭಾಗಿಯಾಗಿದ್ದಾರೆ. ಈ ಬಗ್ಗೆ ಪ್ರಥಮ್ `ನಟ ಭಯಂಕರ ಚಿತ್ರೀಕರಣ ಶುರುವಾಗಿದೆ. ಸಖತ್ತಾಗಿ ನಡೆಯುತ್ತಿದೆ’ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಜೊತೆಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
Advertisement