ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ಸಿನಿಮಾ ರಂಗಕ್ಕೆ ಗುಡ್‍ಬೈ ಹೇಳಲು ತೀರ್ಮಾನಿಸಿದ್ದು, `ನಟಭಯಂಕರ’ ನನ್ನ ಕೊನೆಯ ಸಿನಿಮಾ. ಮುಂದೇ ಸ್ವಗ್ರಾಮಕ್ಕೆ ತೆರಳಿ ವ್ಯವಸಾಯ ಮಾಡಲು ನಿರ್ಧಾರಿಸಿರುವುದ್ದಾಗಿ ತಿಳಿಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಬರೆದು ಕೊಂಡಿರುವ ಪ್ರಥಮ್, ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಮನೆಯಲ್ಲಿ ಮದುವೆ ವಿಚಾರ ಕುರಿತು ಚರ್ಚೆ ನಡೆಯುತ್ತಿದ್ದು, ಅದಷ್ಟು ಬೇಗ ಊರಿನಲ್ಲಿ ಸೆಟ್ಲ್ ಆಗೋಣ ಎಂದು ಚಿಂತನೆ ನಡೆಸಿದ್ದಾಗಿ ಹೇಳಿದ್ದಾರೆ.
Advertisement
Advertisement
ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
ತುಂಬಾ ಮುಖ್ಯವಾದ ವಿಚಾರ. ನಟಭಯಂಕರ ಚಿತ್ರವು ಬಹಳ ಅದ್ಧೂರಿಯಾಗಿ, ಅಚ್ಚುಕಟ್ಟಾಗಿ ಬರುತ್ತಿದ್ದು, ಬಹಳ ಮುಖ್ಯವಾಗಿ ಇದು ನನ್ನ ಚಿತ್ರರಂಗದ ಕೊನೆಯ ಸಿನಿಮಾ. ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಊರಿನಲ್ಲಿ ವ್ಯವಸಾಯ ಮಾಡುವ ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ನನ್ನ ಮದುವೆ ವಿಚಾರವೂ ಮನೆಯಲ್ಲಿ ತುಂಬಾ ಚರ್ಚೆ ನಡೆಯುತ್ತಿದ್ದು, ಮದುವೆ ಆಗುವ ಮುನ್ನವೇ ಊರಿನಲ್ಲಿ ಸೆಟ್ಲ್ ಆಗೋಣ ಎನ್ನುವುದು ಮನೆಯವರ ಎಲ್ಲರ ಆಸೆ. ಈಗಾಗಲೇ ತೋಟದಲ್ಲಿ 200 ತೆಂಗಿನ ಸಸಿಗಳನ್ನ ನೆಟ್ಟು ಮಾದರಿ ರೈತನಾಗಬೇಕೆಂದು ಅದರ ಕಡೆ ಪ್ರಯತ್ನ ಮಾಡುತ್ತಿದ್ದೇನೆ.
Advertisement
Advertisement
ಬೆಂಗಳೂರು ಬೋರಾಗಿದೆ. ಇದೇ ಕಡೇ ಸಿನಿಮಾ ನಮ್ಮ ಮನೆಯವರ ಒತ್ತಡಕ್ಕೆ ಮಣಿದು ಮದುವೆ ಆಗುವುದರ ಬಗ್ಗೆ ಚಿಂತಿಸುತ್ತಿದ್ದೀನಿ. ನಮ್ಮ ಗುರುಗಳು ಶ್ರೀಕಾಂತ್ ಪ್ರೇಮ ಕುಮಾರ್ ಸರ್ ಮತ್ತು ಸೂರಪ್ಪಬಾಬು ನಿರ್ಮಾಪಕರ ಸಂಘದ ಅಧ್ಯಕ್ಷರು ಸುಮ್ನೆ ಬೆಂಗಳೂರಲ್ಲಿ ಇದ್ದು ಕೆಲಸ ಮಾಡು. ಎಲ್ಲಿಗೂ ಹೋಗಬೇಡ ಎಂದು ಹೇಳಿದ್ದಾರೆ. ಒಂದು ಸಿನಿಮಾದಿಂದ ನೂರು ಜನ ಅನ್ನ ತಿನ್ನುತ್ತಾರೆ. ಬಾಯ್ ಮುಚ್ಚಿಕೊಂಡು ನನ್ನ ಮಾತು ಕೇಳು. ಬೆಂಗಳೂರಲ್ಲೇ ಸಿನಿಮಾ ಮಾಡು ಅಂದಿದ್ದಾರೆ. ನೋಡೋಣ… ನನಗಂತೂ ದೇವ್ರಾಣೆ ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ ಎಂದು ಬರೆದುಕೊಂಡಿದ್ದಾರೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಅವರ ತೀರ್ಮಾನದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ನಿಮಗೆ ಮೀಟೂ ಭಯವೇ? ಅದಕ್ಕೆ ಚಿತ್ರರಂಗ ಬಿಡುವ ನಿರ್ಧಾರ ಮಾಡಿದ್ದೀರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv