ಈಗಾಗಲೇ ಥರ ಥರದ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರಾಗಿರುವವರು ಪ್ರಶಾಂತ್ ನಟನಾ. ಕಿರುತೆರೆಯಲ್ಲಿಯೂ ಅಪಾರ ಅಭಿಮಾನಿ ಬಳಗ ಹೊಂದಿರುವ ಪ್ರಶಾಂತ್, ಪರಭಾಷಾ ಚಿತ್ರರಂಗಗಳಲ್ಲಿಯೂ ಮಿಂಚುತ್ತಿರುವವರು. ಇತ್ತೀಚಿನ ದಿನಗಳಲ್ಲಿ ಬೆರಗಿನ ಪಾತ್ರಗಳ ಮೂಲಕ ಸಿನಿಮಾ ಪ್ರೇಮಿಗಳ ಮನಗೆದ್ದಿರೋ ಪ್ರಶಾಂತ್ (Prashanth Natana) ಇದೀಗ ಚಯನ್ ಶೆಟ್ಟಿ (Chayan Shetty) ನಾಯಕನಾಗಿ ನಟಿಸಿರೋ ‘ಅಧಿಪತ್ರ’ ಚಿತ್ರದಲ್ಲಿ ಮಹತ್ವದ್ದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಫೆ.7ರಂದು ತಾರೀಕು ಬಿಡುಗಡೆಗೊಳ್ಳಲಿರುವ ಈ ಚಿತ್ರದಲ್ಲಿ ಅವರು ಎಂಬತ್ತರ ದಶಕದ ಟಿಪಿಕಲ್ ಪತ್ರಕರ್ತನಾಗಿ ನಟಿಸಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ಮದುವೆಯಾದ ‘ಸನಮ್ ತೇರಿ ಕಸಂ’ ಚಿತ್ರದ ನಟಿ ಮೌರಾ
Advertisement
ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಪಾತ್ರಗಳು ವಿಭಿನ್ನವಾಗಿರಬೇಕೆಂಬ ತುಡಿತ ಎಲ್ಲ ಕಲಾವಿದರಲ್ಲಿಯೂ ಇರುತ್ತದೆ. ಒಂದು ಬಗೆಯ ಪಾತ್ರಗಳ ಏಕತಾನತೆಯಿಂದ ತಪ್ಪಿಸಿಕೊಂಡು, ಹೊಸತರದತ್ತ ಕೈ ಚಾಚುತ್ತಾ ಬಂದವರು ಪ್ರಶಾಂತ್ ನಟನಾ. ಈ ಪಾತ್ರಕ್ಕೆ ಚಯನ್ ಶೆಟ್ಟಿ ಕಲಾವಿದರ ಹುಡುಕಾಟದಲ್ಲಿದ್ದಾಗ ನರೇಂದ್ರ ಎಂಬವರು ಪ್ರಶಾಂತ್ ನಟನಾರ ಹೆಸರನ್ನು ಸೂಚಿಸಿದ್ದರಂತೆ. ಬಳಿಕ ಚಯನ್ ಪ್ರಶಾಂತ್ ರನ್ನು ಸಂಪರ್ಕಿಸಿ ಆ ಪಾತ್ರವನ್ನು ವಿವರಿಸಿದಾಗ ಖುಷಿಗೊಂಡಿದ್ದ ಅವರು ಆ ಕ್ಷಣದಲ್ಲಿಯೇ ಒಪ್ಪಿಗೆ ಸೂಚಿಸಿದ್ದರಂತೆ.
ಆ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಮತ್ತೊಂದು ಥರದ ಅನುಭೂತಿ ಪ್ರಶಾಂತ್‌ರ ಪಾಲಿಗೆ ಸಿಕ್ಕಿತ್ತು.
Advertisement
Advertisement
ಅಂದಹಾಗೆ, ಇಲ್ಲಿ ಪ್ರಶಾಂತ್ ಎಂಬತ್ತರ ದಶಕದ ಆಚೀಚಿನ ಪತ್ರಕರ್ತನಾಗಿ, ನಾಯಕಿಯ ತಂದೆಯ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಚಯನ್ ಶೆಟ್ಟಿ ಅದ್ಭುತವಾಗಿ ಈ ಸಿನಿಮಾವನ್ನು ರೂಪಿಸಿದ್ದಾರೆಂಬ ಮೆಚ್ಚುಗೆಯೂ ಅವರಲ್ಲಿದೆ. ಹೀಗೆ ಅಧಿಪತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿರೋ ಪ್ರಶಾಂತ್ ರಂಗಭೂಮಿಯಿಂದ ಬಂದಿರೋ ಗಟ್ಟಿ ಪ್ರತಿಭೆ. ಅಧಿಪತ್ರದಲ್ಲಿನ ಪಾತ್ರ ಅವರ ವೃತ್ತಿ ಬದುಕಿನ ಮೈಲಿಗಲ್ಲಾಗೋದರಲ್ಲಿ ಸಂದೇಹವೇನಿಲ್ಲ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ.
Advertisement
ರೂಪೇಶ್ ಶೆಟ್ಟಿ (Roopesh Shetty), ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಅಧಿಪತ್ರ ಫೆಬ್ರವರಿ 7ರಂದು ಬಿಡುಗಡೆಗೊಳ್ಳಲಿದೆ.