ಮಂಗಳೂರು: ಧಾರ್ಮಿಕ ವಿಚಾರದಲ್ಲಿ, ಪೂಜೆ, ಪುಣ್ಯಸ್ನಾನ ಆಚರಣೆಗಳಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ ಎಂದು ನಟ ಪ್ರಕಾಶ್ ರಾಜ್ (Prakash Raj) ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ (Maha Kumbha Mela) ತಮ್ಮ ಎಐ ಭಾವಚಿತ್ರ ವೈರಲ್ ಆದ ಬಗ್ಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸ್ವಗ್ರಾಮದ ರೇಷ್ಮೆ ಬೆಳೆಗಾರರ ಸಹಕಾರ ಸಂಘ ಚುನಾವಣೆಯಲ್ಲಿ ಡಿಕೆಶಿ ಮತದಾನ
ಮಹಾ ಕುಂಭಮೇಳಕ್ಕೆ ಹೋಗಲು ನನ್ನ ಕೆಲವು ಗೆಳೆಯರು ಪರ್ಮಿಷನ್ ಕೊಡಿಸಿ ಅಂತ ಕೇಳೋದಕ್ಕೆ ಕಾಲ್ ಮಾಡ್ತಾರೆ. ನಾನು ಧರ್ಮ ವಿರೋಧಿ ಅಲ್ಲ, ಏಕೆಂದರೆ ಅದು ಅವರವರ ನಂಬಿಕೆ. ಅದರಲ್ಲಿ ನಂಬಿಕೆ ಇಲ್ಲದಿರಬಹುದು, ಸೌಹಾರ್ದತೆಗೆ ಬೆಲೆ ಕೊಡೋನು ನಾನು. ಆದ್ರೆ ಧಾರ್ಮಿಕ ವಿಚಾರದಲ್ಲೂ, ಪೂಜೆ, ಪುಣ್ಯಸ್ನಾನ ಇಂತಹ ಆಚರಣೆಗಳಲ್ಲೂ ರಾಜಕಾರಣ ಎಳೆದುತರುವವರು ನಿಜವಾದ ಹಿಂದೂಗಳಲ್ಲ ಎಂದು ನುಡಿದರು.
ಒಬ್ಬ ವ್ಯಕ್ತಿ ಸರ್ಕಾರವನ್ನ ಪ್ರಶ್ನಿಸಿದ್ರೆ ಅವನ ಬಗ್ಗೆ ವಾಟ್ಸಪ್ ಯೂನಿವರ್ಸಿಟಿಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತದೆ. ಅಂತಹದ್ದೆಲ್ಲವನ್ನ ಪ್ರಶಾಂತ್ ಸಂಬರಗಿ ಅಂತವರು ಮಾಡುತ್ತಿದ್ದಾರೆ. ಅವರ ಮೇಲೆ ಈಗಾಗಲೇ ಕೇಸ್ ಫೈಲ್ ಮಾಡಿದ್ದೇವೆ. AI ನಂತಹ ಅದ್ಭುತ ತಂತ್ರಜ್ಞಾನವನ್ನ ಮಾನವ ವಿಕಾಸಕ್ಕೆ ಬಳಸಬೇಕು, ಆದ್ರೆ ಇಂತಹ ಕೆಲಸಗಳಿಗೆ ಬಳಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಸೂರು: ನಟ ಧನಂಜಯ್, ಡಾಕ್ಟರ್ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು