ಮೈಸೂರು: ಸಂಸದ ಹಾಗೂ ಬಹುಭಾಷಾ ನಟನ ಕೋಲ್ಡ್ ವಾರ್ ಮುಂದುವರೆದಿದ್ದು, ಇದೀಗ ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಕೇವಲ 1 ರೂ ಪರಿಹಾರ ಕೋರಿ ಮೈಸೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ರೈ ನಿರ್ಧರಿಸಿದ್ದಾರೆ. ಹೀಗಾಗಿ ಪ್ರಕಾಶ್ ರೈ ಇಂದು ಮಧ್ಯಾಹ್ನ ಮೈಸೂರು ನ್ಯಾಯಾಲಯಕ್ಕೆ ತೆರಳಿ ಕೇಸು ದಾಖಲಿಸಲಿದ್ದಾರೆ. ಇದನ್ನೂ ಓದಿ: ಅಪ್ರಸ್ತುತ ವ್ಯಕ್ತಿಗಳ ಬಗ್ಗೆ ಮಾತನಾಡಲ್ಲ: ಪ್ರತಾಪ್ ಸಿಂಹ
ಈ ಹಿಂದೆ ನವೆಂಬರ್ 23 ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರೈ 10 ದಿನದ ಒಳಗೆ ದೂರಿಗೆ ಉತ್ತರ ಕೊಡಬೇಕು ಲಿಗಲ್ ನೋಟಿಸ್ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ನಿಮ್ಮ ನೋಟಿಸ್ ಲಿಗಲ್ ಆಗಿ ಇಲ್ಲ ಅದಕ್ಕೆ ಉತ್ತರಿಸಲ್ಲ ಎಂದು ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದರು. ಆದರೆ ಇದೀಗ ರೈ ಅಧಿಕೃತವಾಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮ್ಮೆ ಹೂಡಲು ಸಜ್ಜಾಗಿದ್ದಾರೆ. 1 ರೂ ಪರಿಹಾರಕ್ಕೆ ಮನವಿ ಮಾಡಿ ಕೇಸು ದಾಖಲಿಸಲಿದ್ದಾರೆ. ಇದನ್ನೂ ಓದಿ: ನಾನು ಹೇಳಿಕೆ ನೀಡಲ್ಲ, ಹೋರಾಡೋ ವ್ಯಕ್ತಿ: ಪ್ರತಾಪ್ ಸಿಂಹ ವಿರುದ್ಧ ರೈ ಕಿಡಿ
ಪ್ರತಾಪ್ ಸಿಂಹ ಟ್ವೀಟ್ ಏನಿತ್ತು?
ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ? ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್‍ಲೈನ್ ಈ ಸುದ್ದಿಯಲ್ಲಿತ್ತು. ಇದನ್ನೂ ಓದಿ: ನಟ ಪ್ರಕಾಶ್ ರಾಜ್ ವಿರುದ್ಧ ಕೇಸ್ ದಾಖಲು
ಇದನ್ನು ಓದಿ: ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಿನಲ್ಲಿ ರೈ, ಇಲ್ಲಿ ರಾಜ್: ಪ್ರತಾಪ್ ಸಿಂಹ
ಇದನ್ನು ಓದಿ: ಮೋದಿ, ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಟಾಂಗ್ ನೀಡಿದ ನಟ ಪ್ರಕಾಶ್ ರೈ