ಬೆಳಗಾವಿ: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೇಲೆ ಪ್ರಹಾರ ನಡೆಸುತ್ತಿರುವ ನಟ ಪ್ರಕಾಶ್ ರೈ ಗೌರಿ ಲಂಕೇಶ್ ಹತ್ಯೆ ನಂತರ ಗೋರಿಯಿಂದ ಹೊರ ಬಂದಿದ್ದಾರೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾವರಿ, ಮಹದಾಯಿ ಮತ್ತು ಕೃಷ್ಣ ನದಿ ಬಗ್ಗೆ ರೈ ಮಾತನಾಡಲ್ಲ. ನಟನಾಗಿ ಎಲ್ಲ ಭಾಷೆಯಿಂದ ಆಗೋ ಲಾಭ ಬೇಕು. ಕಾಂಗ್ರೆಸ್ ಅಧಿಕಾರದಲ್ಲಿಯೇ ಕಲಬುರ್ಗಿ, ಗೌರಿ, ಪನ್ಸಾರೆ ಹತ್ಯೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಪ್ರಕಾಶ್ ರೈ ಮಾತನಾಡಬೇಕು. ಬೈಯೋದಾದ್ರೆ ಎಲ್ಲರನ್ನು ಬೈಯಿರಿ ಇಲ್ಲವಾದ್ರೆ ನೀವು ಕಾಂಗ್ರೆಸ್ ಏಜೆಂಟ್ ಎನ್ನುವುದು ಸಾಬೀತಾಗುತ್ತದೆ ಅಂತ ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ನನಗೆ ಲೇಟಾಗಿ ಆದರೂ ಜ್ಞಾನೋದಯ ಆಗಿದೆ, ಹೀಗಾಗಿ ಕ್ಷಮಿಸಿ: ಪ್ರಕಾಶ್ ರೈ
Advertisement
ಇದೇ ವೇಳೆ ವಿಎಚ್‍ಪಿಯಿಂದ ಪ್ರವೀಣ್ ತೊಗಾಡಿಯ ಉಚ್ಛಾಟನೆ ವಿಚಾರದ ಕುರಿತು ಮಾತನಾಡಿದ ಅವರು, ಇದು ಅತ್ಯಂತ ನೀಚ, ನಿರ್ಲಜ್ಜದ ಕೆಲಸವಾಗಿದ್ದು ಖಂಡನೀಯವಾಗಿದೆ. ತೊಗಾಡಿಯ ಉಚ್ಛಾಟನೆ ಹಿಂದೆ ಮೋದಿ, ಆರ್ ಎಸ್ ಎಸ್ ಕೈವಾಡವಿದೆ. ಪ್ರವೀಣ ತೊಗಾಡಿಯ ಮಾಡಿದ ಅಪರಾಧ ಏನು? ಹಿಂದೂ ಮತಗಳನ್ನು ಒಗ್ಗೂಡಿಸಲು ಪ್ರವೀಣ ತೊಗಾಡಿಯಾ ಬೇಕು. ಆದರೇ ಈಗ ಯಾರೊಬ್ಬರು ಆರ್ ಎಸ್ ಎಸ್ ವಿರುದ್ಧ ಧ್ವನಿ ಎತ್ತುತ್ತಿಲ್ಲ. ನಿಮ್ಮ ಅವಧಿಯಲ್ಲಿ ರಾಮಮಂದಿರ ನಿರ್ಮಿಸಿ ಅಂತ ಹೇಳಿದ್ದ ತೊಗಾಡಿಯ ಮಾಡಿದ್ದು ತಪ್ಪಾ? ಗೋ ಹತ್ಯೆ, ಸಮಾನ ನಾಗರೀಕ ಕಾಯ್ದೆ ಜಾರಿ ಮಾಡಿ ಅಂತ ಹೇಳಿದ್ದೆ ತಪ್ಪೇ? ರಾಮ ಮಂದಿರದ ಹೆಸರಲ್ಲಿ ಕಟ್ಟಿಸುವ ಹೆಸರಿನಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ. ಇದೀಗ ಆರ್ ಎಸ್ ಎಸ್ ಕಟ್ಟಪ್ಪಣೆ ಮೀರಿದ್ದಕ್ಕೆ ತೊಗಾಡಿಯಾ ಉಚ್ಛಾಟನೆಯಾಗಿದ್ದಾರೆ ಅಂತ ಸಿಡಿಮಿಡಿಗೊಂಡರು. ಇದನ್ನೂ ಓದಿ: ಮೋದಿ, ಅಮಿತ್ ಶಾ ತಲೆಯಲ್ಲಿ ಏನು ಇಲ್ಲ ಅನ್ನೋದಕ್ಕೆ ಪುರಾವೆ ನನ್ನಲ್ಲಿದೆ: ಪ್ರಕಾಶ್ ರೈ
Advertisement
ತೊಗಾಡಿಯ ಉಚ್ಛಾಟನೆ ಖಂಡಿಸಿ ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯದ 22 ಜಿಲ್ಲೆಯಲ್ಲಿ ಶ್ರೀರಾಮಸೇನೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದೆ. ಶ್ರೀರಾಮಸೇನೆಗೆ 5 ಹಿಂದುಪರ ಸಂಘಟನೆಗಳ ಬೆಂಬಲ ಸೂಚಿಸಿವೆ ಅಂತ ಅವರು ತಿಳಿಸಿದ್ರು.