ನಟ ಪ್ರಜ್ವಲ್ ದೇವರಾಜ್ (Prajwal Devaraj) ಅನಾರೋಗ್ಯದ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಅವರ ಕುಟುಂಬ ಗರಂ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ‘ಪ್ರಜ್ವಲ್ ದೇವರಾಜ್ ಇನ್ನಿಲ್ಲ’ ಎನ್ನುವ ಪೋಸ್ಟರ್ ವೈರಲ್ ಆಗಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಆತಂಕದಲ್ಲಿದ್ದರು.
ಪ್ರಜ್ವಲ್ ದೇವರಾಜ್ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಚಾರವಾಗಿ ಅವರ ಕುಟುಂಬಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ. ಪ್ರಜ್ವಲ್ ಕ್ಷೇಮವಾಗಿದ್ದಾರೆ. ಅವರ ಆರೋಗ್ಯದಲ್ಲಿ (Health) ಯಾವುದೇ ಬದಲಾವಣೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು (Fake news) ವದಂತಿಗಳನ್ನ ಹಬ್ಬಿಸಲಾಗಿದೆ. ಪ್ರಜ್ವಲ್ ದೇವರಾಜ್ ಅವರ ಪೋಟೋಗಳನ್ನ ದುರ್ಬಳಕೆ ಮಾಡಲಾಗಿದೆ.
ಆರೋಗ್ಯವಂತ ನಟನ ಬಗ್ಗೆ ಈ ರೀತಿಯ ವದಂತಿಗಳು ಸಲ್ಲದು. ಇದರಿಂದ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನ ಆತಂಕ ಉಂಟಾಗುತ್ತದೆ. ಕಿಡಿಗೇಡಿಗಳು ಪ್ರಜ್ವಲ್ ದೇವರಾಜ್ ಆರೋಗ್ಯದ ಬಗ್ಗೆ ಅನಗತ್ಯ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಈ ಬಗ್ಗೆ ಕಾನೂನು ಸಲಹೆ ಪಡೆದು ದೂರು ನೀಡಲು ನಿರ್ಧಾರ. ಪ್ರಜ್ವಲ್ ದೇವರಾಜ್ ಆರೋಗ್ಯವಾಗಿದ್ದಾರೆ. ಅಭಿಮಾನಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಜ್ವಲ್ ದೇವರಾಜ್ ಆಪ್ತ ಮೂಲಗಳು ಮಾಹಿತಿ ನೀಡಿವೆ.