ನಟ ಪ್ರಭುದೇವ (Actor Prabhudeva) ಸದ್ಯ `ವೂಲ್ಫ್’ (Wolf) ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಬಹುನಿರೀಕ್ಷಿತ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕನ್ನಡದ ದೈತ್ಯ ಪ್ರತಿಭೆಗಳು ಕೂಡ ಸಾಥ್ ನೀಡಿದ್ದಾರೆ. ಈ ಕುರಿತ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ.
ಕನ್ನಡ ನಾಡಿನ ಯುವ ನಿರ್ದೇಶಕ ವಿನೂ ವೆಂಕಟೇಶ್ (Vinoo Venkatesh) ಇದೀಗ ಪ್ರಭುದೇವ ಅವರ 60ನೇ ಚಿತ್ರ `ವೂಲ್ಫ್’ ಸಿನಿಮಾಗೆ ಡೈರೆಕ್ಷನ್ ಮಾಡ್ತಿದ್ದಾರೆ. ಮಿಸ್ಟರಿ ಕಥೆಯನ್ನ ವಿಭಿನ್ನವಾಗಿ ಹೇಳೋಕೆ ಹೊರಟಿದ್ದಾರೆ. ಪ್ರಭುದೇವ ಅವರ ಚಿತ್ರದಲ್ಲಿ ತಾರೆಯರ ದಂಡೇ ಇದೆ. ಸೂಪರ್ ಸ್ಟಾರ್ ಜೊತೆ ಕನ್ನಡದ ಪ್ರತಿಭೆ ವಸಿಷ್ಠ ಸಿಂಹ (Vasista Simha) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ವಸಿಷ್ಠ ಸಿಂಹ ಅವರು ಪತ್ರಕರ್ತನಾಗಿ (Journalist) ಕಾಣಿಸಿಕೊಂಡಿದ್ದಾರೆ. ಇವರ ಪಾತ್ರ ಇಡೀ ಚಿತ್ರಕಥೆಗೆ ಮುಖ್ಯವಾಗಿರುತ್ತದೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ವಸಿಷ್ಠ ನಟಿಸಿದ್ದಾರೆ. ಇದನ್ನೂ ಓದಿ:ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ʻರಾಯಲ್ʼ ಆಗಿ ಮಿಂಚಲು ವಿರಾಟ್ ರೆಡಿ
ʻWOLFʼ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ಒಂದು ಹಾಡನ್ನ ಹಾಡಿದ್ದಾರೆ. ಇದು ವಿಶೇಷವಾಗಿ ಹಾಡಿರುವ ಹಾಡು ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಮತ್ತಷ್ಟು ಸಿಗಲಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮಾರ್ಚ್ನಲ್ಲಿ ರಿಲೀಸ್ ಮಾಡೋಕೆ ರೆಡಿಯಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k