ನಟ, ನಿರ್ದೇಶಕ ಪ್ರಭುದೇವ (Prabhudeva) ಹೆಣ್ಣು ಮಗುವಿನ ತಂದೆಯಾಗಿದ್ದಾರೆ (Father). ಪ್ರಭುದೇವ ಅವರ ಎರಡನೇ ಪತ್ನಿ ಹಿಮಾನಿ ಸಿಂಗ್ ಗೆ ಇಂದು ಹೆರಿಗೆ ಆಗಿದ್ದು, ಈ ಮೂಲಕ 50 ವಯಸ್ಸಿನಲ್ಲಿ ಪ್ರಭುದೇವ ತಂದೆಯಾಗಿದ್ದಾರೆ. ಈವರೆಗೂ ಪ್ರಭುದೇವ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿರಲಿಲ್ಲವಂತೆ ಹಾಗಾಗಿ ಸಹಜವಾಗಿಯೇ ಕುಟುಂಬಕ್ಕೆ ಸಂಭ್ರಮ ತಂದಿದೆ.
ಪ್ರಭುದೇವ ಮೊದಲ ಪತ್ನಿಯಿಂದ ಗಂಡು ಮಗು (Child) ಪಡೆದಿದ್ದರು. ಆದರೆ, ಮಗು ಅಕಾಲಿಕ ಮರಣಕ್ಕೆ ತುತ್ತಾಗಿತ್ತು. ಮೊದಲ ಪತ್ನಿ ಜೊತೆಗಿನ ಹೊಂದಾಣಿಕೆಯ ಕೊರತೆಯಿಂದಾಗಿ ಡಿವೋರ್ಸ್ ಪಡೆದರು. ಕೋವಿಡ್ ಸಂದರ್ಭದಲ್ಲಿ ವೃತ್ತಿಯಲ್ಲಿ ವೈದ್ಯಯಾಗಿರುವ ಹಿಮಾನಿ ಸಿಂಗ್ (Himani Singh) ಜೊತೆ ಡೇಟ್ ಮಾಡಿದ್ದರು. ಆನಂತರ ಗುಟ್ಟಾಗಿಯೇ ಮದುವೆಯಾಗಿದ್ದರು. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ
ಇತ್ತೀಚೆಗಷ್ಟೇ ಹಿಮಾನಿ ಸಿಂಗ್ ಜೊತೆ ಪ್ರಭುದೇವ ಮದುವೆ ಆಗಿರುವ ವಿಚಾರ ಬಹಿರಂಗವಾಗಿತ್ತು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಭುದೇವ ಎರಡನೇ ಮದುವೆ ವಿಚಾರವನ್ನು ಹಂಚಿಕೊಂಡಿದ್ದರು. ಹಿಮಾನಿ ಜೊತೆಗಿನ ಪರಿಚಯ, ಪ್ರೀತಿ-ಪ್ರೇಮ, ಮದುವೆ ಎಲ್ಲವನ್ನೂ ಜನರೆದುರು ತೆರೆದಿಟ್ಟಿದ್ದರು. ಇದೀಗ ಹಿಮಾನಿ ಮತ್ತು ಪ್ರಭುದೇವ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.