‘ಕೆಜಿಎಫ್’, ‘ಸಲಾರ್’ ನಿರ್ದೇಶಕ ಪ್ರಶಾಂತ್ ನೀಲ್‌ಗೆ (Prashanth Neel) ಇಂದು (ಜೂನ್.4) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಡಾರ್ಲಿಂಗ್ ಪ್ರಭಾಸ್ (Prabhas) ವಿಶೇಷವಾಗಿ ಶುಭಕೋರಿದ್ದಾರೆ. ಪ್ರಭಾಸ್ ಬಳಿಕ ಅನೇಕ ಸ್ಟಾರ್ ನಟ- ನಟಿಯರು ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್ ಪತ್ನಿ ನತಾಶಾ
43ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಶಾಂತ್ ನೀಲ್ ‘ಲವ್ ಯೂ ಸರ್’ ಎಂದು ಸ್ವೀಟ್ ಆಗಿ ಪ್ರಭಾಸ್ ವಿಶ್ ಮಡಿದ್ದಾರೆ. ಸುಂದರವಾದ ಜನ್ಮದಿನದ ಶುಭಾಶಯಗಳು ಎಂದಿದ್ದಾರೆ. ಪ್ರಶಾಂತ್ ನೀಲ್‌ಗೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ಹೊಂಬಾಳೆ ಸಂಸ್ಥೆ ಸೇರಿದಂತೆ ಅನೇಕರು ಬರ್ತ್‌ಡೇಗೆ ವಿಶ್ ಮಾಡಿದ್ದಾರೆ.
ಅಂದಹಾಗೆ, ಸಲಾರ್ (Salaar) ಸಿನಿಮಾದ ನಂತರ ಇತ್ತೀಚೆಗೆ ‘ಸಲಾರ್ 2’ ಸಿನಿಮಾ ನಿಂತು ಹೋಗಿದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿಲ್ಲ ಎಂದು ಎಂದೆಲ್ಲಾ ಸುದ್ದಿ ಹಬ್ಬಿತ್ತು. ಇದೀಗ ಪ್ರಭಾಸ್ ವಿಶ್ ಮಾಡಿರುವ ರೀತಿ ನೋಡಿ ಹಬ್ಬಿರುವ ವದಂತಿಗಳಿಗೆ ತೆರೆ ಬಿದ್ದಿದೆ.
ಪ್ರಶಾಂತ್ ನೀಲ್ ಸದ್ಯ ‘ದೇವರ’ (Devara Film) ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಳಿಕ ‘ಸಲಾರ್ 2’ ಸಿನಿಮಾದತ್ತ ಗಮನ ಕೊಡಲಿದ್ದಾರೆ.