ಪ್ರಭಾಸ್ (Prabhas) ನಟನೆಯ ಕಲ್ಕಿ ಸಿನಿಮಾದ ಮತ್ತೊಂದು ಪೋಸ್ಟರ್ (Poster) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವ (Bhairava) ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜುಟ್ಟು ಬಿಟ್ಟುಕೊಂಡು ಸ್ಟೈಲಿಶ್ ಆಗಿ ಕಂಡಿದ್ದಾರೆ ಪ್ರಭಾಸ್. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Advertisement
ಕಲ್ಕಿ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ರಾಜಮೌಳಿಯೂ (Rajamouli) ಪಾತ್ರ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಅವರು ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದು, ಅದು ವಿಜ್ಞಾನಿ (Scientist) ಪಾತ್ರವಾಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಇಂಥದ್ದೊಂದು ಸುದ್ದಿಯಂತೂ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ.
Advertisement
Advertisement
ಪ್ರತಿ ಹಂತದಲ್ಲೂ ನಾನಾ ರೀತಿಯ ಸುದ್ದಿಗಳನ್ನು ಮಾಡುತ್ತಲೇ ಬರುತ್ತಿದೆ ಚಿತ್ರತಂಡ. ಮೊನ್ನೆಯಷ್ಟೇ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look) ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.
Advertisement
ಈ ನಡುವೆ ಕಲ್ಕಿ (Kalki) ಸಿನಿಮಾದ ಫೋಟೋವೊಂದು ಲೀಕ್ ಆಗಿತ್ತು. ಸಿನಿಮಾದ ಪ್ರಮುಖ ಗೆಟಪ್ ಒಳಗೊಂಡಿದ್ದ ಆ ಫೋಟೋವನ್ನು ಯಾರು ಲೀಕ್ ಮಾಡಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಲೆಕೆಡಿಸಿಕೊಂಡಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ಹೀಗೆ ಪಾತ್ರಗಳ ಬಗ್ಗೆ ರಿವಿಲ್ ಮಾಡುತ್ತಿರುವುದು ಕೋಪ ತರಿಸಿತ್ತು. ಇದೀಗ ನಿರ್ಮಾಪಕರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.
ಕಲ್ಕಿ ಸಿನಿಮಾದ ವಿಎಫ್ಎಕ್ಷ್ ಮಾಡುತ್ತಿರುವ ಸಂಸ್ಥೆಯೇ ಫೋಟೋವನ್ನು ಲೀಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರು ಪೊಲೀಸ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.