ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas), ದೇಣಿಗೆ ಕೊಡುವ ಕಾರಣದಿಂದಾಗಿ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಅದೇ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ತೆಲುಗು ಸಿನಿಮಾ ನಿರ್ದೇಶಕರ ಸಂಘಕ್ಕೆ (Directors Association) ಅವರು ಬರೋಬ್ಬರಿ 35 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ (Donation) ನೀಡಿದ್ದಾರೆ. ತಮ್ಮ ಬೆಳವಣಿಗೆಯಲ್ಲಿ ನಿರ್ದೇಶಕರ ಪಾತ್ರ ತುಂಬಾ ಇದೆ ಎನ್ನುವ ಉದ್ದೇಶದಿಂದ ಇಂಥದ್ದೊಂದು ಕೆಲಸ ಮಾಡಿದ್ದಾರೆ.
ಸದ್ಯ ಪ್ರಭಾಸ್ ಕಲ್ಕಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕಲ್ಕಿ (Kalki) ಸಿನಿಮಾದ ಬಿಡುಗಡೆ ದಿನಾಂಕ ಬದಲಾಗುತ್ತಲೇ ಇದೆ. ಈಗಾಗಲೇ ಎರಡು ಬಾರಿ ಡೇಟ್ ಬದಲಾವಣೆಯ ಬಗ್ಗೆ ಚರ್ಚೆಯಾಗಿದೆ. ಅಂತಿಮವಾಗಿ ಜೂನ್ 20ರಂದು ಚಿತ್ರ ಬಿಡುಗಡೆ (Release) ಮಾಡುವುದಾಗಿ ತಿಳಿದುಬಂದಿದೆ. ಚುನಾವಣೆ, ಫಲಿತಾಂಶ ಎಲ್ಲವೂ ಮುಗಿದ ನಂತರ ಕಲ್ಕಿ ಬಿಡುಗಡೆ ಆಗಲಿದೆ.
ಬಿಡುಗಡೆಗೂ ಮುನ್ನ ಕಲ್ಕಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಿತಾ? ಹೌದು ಎನ್ನುತ್ತಿದೆ ಬಿಟೌನ್. ಹಿಂದಿ ಭಾಷೆಯಲ್ಲೇ ಕಲ್ಕಿ 175 ಕೋಟಿ ರೂಪಾಯಿಗೆ ಒಟಿಟಿಗೆ (OTT) ಸೇಲ್ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ದಕ್ಷಿಣದ ಭಾಷೆಗಳಿಗೂ ನೂರಾರು ಕೋಟಿ ಕೊಟ್ಟು ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ರಿಲಿಸ್ ಗೂ ಮುನ್ನ ದಾಖಲೆಯ ಮೊತ್ತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.