ಎರಡು ತಿಂಗಳ ವಿರಾಮ ಘೋಷಿಸಿದ ನಟ ಪ್ರಭಾಸ್

Public TV
2 Min Read
Prabhas 2

ಪ್ರಭಾಸ್ (Prabhas) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅದಕ್ಕೆ ಕಾರಣ ಸಲಾರ್ (Salaar) ಮಹಾ ಗೆಲುವು. ಭರ್ತಿ ಏಳು ನೂರು ಕೋಟಿಯನ್ನು ಗಳಿಸಿ ಮತ್ತೆ ರೆಬೆಲ್‌ ಸ್ಟಾರ್‌ಗೆ ಆನೆ ಬಲ ನೀಡಿದೆ. ಮೂರು ಸೋಲಿನಿಂದ ಒದ್ದಾಡುತ್ತಿದ್ದ ಡಾರ್ಲಿಂಗ್ ಅದೇ ಖುಷಿಯಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಎರಡು ತಿಂಗಳು ಯಾರಿಗೂ ಸಿಗಲ್ಲ ಎಂದು ಘೋಷಿಸಿದ್ದಾರೆ. ಏಕಾಏಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್? ಎರಡು ತಿಂಗಳು ಏನು ಮಾಡಲಿದ್ದಾರೆ ? ಅದರ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ.

prabhas 1

ಸಲಾರ್. ಇದೊಂದು ಗೆಲುವು ಬೇಕಾಗಿತ್ತು. ಒಂದಲ್ಲ ಎರಡಲ್ಲ, ಭರ್ತಿ ಮೂರು ಮೂರು ಸಿನಿಮಾ ಆಕಾಶ ನೋಡಿದ್ದವು. ಅಂದರೆ ಹೆಚ್ಚು ಕಮ್ಮಿ ಐದು ವರ್ಷ ಪ್ರಭಾಸ್‌ಗೆ ಗೆಲುವು ದಕ್ಕಿರಲಿಲ್ಲ. ಗೆಲುವನ್ನು ಪಕ್ಕಕ್ಕಿಡಿ. ಈ ಸಿನಿಮಾಗಳಿಂದ ಅವರು ಅತಿ ಹೆಚ್ಚು ಟೀಕೆ ಎದುರಿಸಬೇಕಾಯಿತು. ಹೀಗಾಗಿ ಪ್ರಶಾಂತ್ ನೀಲ್ ಮೇಲೆ ಭರವಸೆ ಇಟ್ಟಿದ್ದರು. ಕೊನೆಗೂ ನೀಲ್ ಕೈ ಬಿಡಲಿಲ್ಲ. ಮಿಶ್ರ ಪ್ರತಿಕ್ರಿಯೆ ನಡುವೆಯೂ ನೀಲ್ ಮ್ಯಾಜಿಕ್ ಕೆಲಸ ಮಾಡಿತ್ತು. ಬರೋಬ್ಬರಿ ಏಳು ನೂರು ಕೋಟಿಯನ್ನು ಗಳಿಸಿತು. ಹೊಂಬಾಳೆ ಸಂಸ್ಥೆ ಮೀಸೆ ತಿರುವಿತು. ಪ್ರಭಾಸ್ ಮೈ ಕೊಡವಿ ಎದ್ದು ನಿಂತರು. ಇದೇ ಖುಷಿಯಲ್ಲಿ ಯುರೋಪ್‌ಗೆ ಎರಡು ತಿಂಗಳು ಹಾರಲಿದ್ದಾರೆ. ಪಿಕ್‌ನಿಕ್ ಅಲ್ಲಪ್ಪಾ, ಚಿಕಿತ್ಸೆ ಮಾಡಿಸಿಕೊಂಡು ಬರಲು.

Prashanth neel and prabhas

ಸಿನಿಮಾ ಮಂದಿಗೆ ಇದು ಹೊಸದಲ್ಲ. ಶೂಟಿಂಗ್ ಸಮಯದಲ್ಲಿ ಯಾವ್ಯಾವುದೋ ಕಾರಣಕ್ಕೆ ಏಟು ಬಿದ್ದಿರುತ್ತವೆ. ಅದನ್ನು ಆ ಕ್ಷಣಕ್ಕೆ ಸರಿ ಮಾಡಿಕೊಂಡು ಮತ್ತೆ ಕ್ಯಾಮೆರಾ ಮುಂದೆ ನಿಂತಿರುತ್ತಾರೆ. ಆದರೆ ಅದು ಸಾಕಾಗಲ್ಲ. ಅದಕ್ಕೆ ವಿದೇಶದಲ್ಲಿ ಶಸ್ತ್ರ ಚಿಕಿತ್ಸೆ (Surgery) ನಡೆಯಬೇಕು. ಅದಕ್ಕಾಗಿಯೇ ಪ್ರಭಾಸ್ ಎರಡು ತಿಂಗಳು ವಿಶ್ರಾಂತಿ ತೆಗೆದುಕೊಂಡು, ಮೈ ಹಗುರ ಹಾಗೂ ಗಟ್ಟಿ ಮಾಡಿಕೊಂಡು ಬರಲು ವಿಮಾನ ಏರಲಿದ್ದಾರೆ. ಇದೇನು ತೀರಾ ಗಂಭೀರ ಆಪರೇಶನ್ ಅಲ್ಲ. ಕೆಲವು ದಿನ ರೆಸ್ಟ್ ಮಾಡಿ, ಮತ್ತೆ ಕಲ್ಕಿ ಹಾಗೂ ರಾಜಾಸಾಬ್ ಶೂಟಿಂಗ್‌ಗೆ ಎಂಟ್ರಿ ಕೊಡಲಿದ್ದಾರೆ.

ಎರಡು ತಿಂಗಳಲ್ಲಿ ಮತ್ತೆ ಕುದುರೆಯಂತೆ ಎದ್ದು ಬರುವ ಪ್ರಭಾಸ್ ಗಾಗಿ ಅವರ ಅಭಿಮಾನಿಗಳು ಕಾಯುತ್ತಾರೆ. ಕಾಯುವುದರಲ್ಲಿ ಸುಖವಿದೆ ಎನ್ನುವುದು ಅವರ ಅಭಿಮಾನಿಗಳು ಅರಿತುಕೊಂಡಿದ್ದಾರೆ.

Share This Article