ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತೆ ಅವರ ಅಭಿಮಾನಿ ದೇವರುಗಳು ಕೂಡ ಆದರ್ಶರಾಗಿದ್ದಾರೆ. ಅಪ್ಪು 12 ದಿನಗಳ ಕಾರ್ಯ ನಿರ್ವಿಘ್ನ. ಈ ಮೂಲಕ ಎಲ್ಲವೂ ಶಾಂತಿಯುತವಾಗಿ ನಡೆದಿದೆ. ಅಪ್ಪು ಸಾವಿನ ಸುದ್ದಿ, ಅಂತಿಮ ದರ್ಶನ, ಅಂತ್ಯಕ್ರಿಯೆ, ಪುಣ್ಯಾರಾಧನೆ, ಅನ್ನ ಸಂತರ್ಪಣೆವರೆಗೂ ಅಭಿಮಾನಿಗಳು ಶಾಂತಚಿತ್ತದಿಂದ ವರ್ತಿಸಿದ್ದಾರೆ. ಈ ಮೂಲಕ ‘ಅಭಿ’ಮಾನಿ ಸಾಗರ ಅಪ್ಪುವನ್ನು ಶಾಂತಿಯುತವಾಗಿ ಬೀಳ್ಕೊಟ್ಟಿದೆ.
Advertisement
* ಅ.29 – ಅಪ್ಪುಗೆ ಹೃದಯಾಘಾತ, ನಿಧನ:
ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಅಪ್ಪುಗೆ ಗಂಟೆ ದೊಡ್ಮನೆ ಭಕ್ತರ ಹೃದಯ ಘಾಸಿಯಾದ ದಿನ. ಹೃದಯ ಚುಚ್ಚುತ್ತಿದ್ದರೂ ಹೊರತು ಅಭಿಮಾನಿಗಳು ಸಂಯಮ, ತಾಳ್ಮೆ ಬಿಟ್ಟುಕೊಡ್ತಿಲ್ಲ. ವಿಕ್ರಂ ಆಸ್ಪತ್ರೆ ಬಳಿ ಕಣ್ಣೀರು ಹಾಕಿ,ಬಿದ್ದು ಒದ್ದಾಡಿದರು. ಆದರೆ ಕಾನೂನು ಕಟ್ಟಳೆ ಮೀರಲಿಲ್ಲ. ಮಧ್ಯಾಹ್ನ 3 ಗಂಟೆ ಸದಾಶಿವನಗರದ ನಿವಾಸದಲ್ಲಿ ಪುನೀತ್ ಪಾರ್ಥೀವ ಶರೀರ ಇದ್ದಾಗಲೂ ವಿನಯತೆ – ತಾಳ್ಮೆಯಲ್ಲೂ ಅಭಿಮಾನಿಗಳು ‘ರಾಜಕುಮಾರ’ನ ಹಿಂಬಾಲಿಸಿದರು.
Advertisement
Advertisement
* ಅ.29 – ಅಂತಿಮ ದರ್ಶನ:
ಅಕ್ಟೋಬರ್ 7ರ ಸಂಜೆ 7 ಗಂಟೆಗೆ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಭರ್ತಿ 35 ಗಂಟೆಗಳು ಅಪ್ಪು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 25 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಮಳೆ, ಚಳಿ, ಹಗಲು ರಾತ್ರಿ ನಿಂತರೂ ದೊಡ್ಮನೆ ಅಭಿಮಾನಿ ದೇವರುಗಳು ವಿಚಲಿತರಾಗಿರಲಿಲ್ಲ.
Advertisement
* ಅ. 31. – ಅಪ್ಪು ಅಂತ್ಯಕ್ರಿಯೆ:
ಅಕ್ಟೋಬರ್ 31 ರ ಬೆಳಗ್ಗೆ 5 ಗಂಟೆ ಅಪ್ಪು ಅಂತಿಮ ಯಾತ್ರೆಯ ವೇಳೆ ತಮ್ಮ ಆರಾಧ್ಯ ದೈವದ ಧ್ಯೇಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡರು. ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ದರ್ಶನ ಪಡೆದರು. ಬೆಳಗ್ಗೆ 8.30ಕ್ಕೆ ಪ್ರೀತಿಯ ಅಪ್ಪು ಅಂತ್ಯಕ್ರಿಯೆ ನಡೆದಿದ್ದು, ಅಂತಿಮ ವಿದಾಯ ಹೇಳುವಾಗಲೂ ದೊಡ್ಮನೆ ಫ್ಯಾನ್ಸ್ ದೊಡ್ಡತನ ಮೆರೆದಿದ್ದಾರೆ. ಇದನ್ನೂ ಓದಿ: ಸೌದೆ ಹಿಡಿದು ದೇವಿರಮ್ಮನ ದರ್ಶನ – ಅಪ್ಪು ಅಭಿಮಾನಿಯ ವಿಶೇಷ ಹರಕೆ!
* ನ.2 – ಹಾಲು-ತುಪ್ಪ:
ನವೆಂಬರ್ 2 ಬೆಳಗ್ಗೆ 11.30 ಅಪ್ಪು ಹಾಲು- ತುಪ್ಪ ಈ ವೇಳೆಯೂ ಅಭಿಮಾನಿ ದೇವರುಗಳ ದೊಡ್ಡತನ ಕರುನಾಡಲ್ಲಿ ಆದರ್ಶವಾಯಿತು.
* ನ.3 – ಸಮಾಧಿ ದರ್ಶನ:
ನವೆಂಬರ್ 3ರ ಬೆಳಗ್ಗೆ 9 ಗಂಟೆಯಿಂದ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಅತ್ತು ಅತ್ತು ಗೋಳಾಡಿದರು ಹೊರತು ಅಭಿಮಾನಿಗಳೂ ಕಾನೂನು ವ್ಯಾಪ್ತಿಯ ಗಡಿ ದಾಟಲಿಲ್ಲ.
* ನ.8 – ಪುಣ್ಯತಿಥಿ
ನವೆಂಬರ್ 8 ಅಪ್ಪು ಪುಣ್ಯತಿಥಿ ಕಾರ್ಯಕ್ರಮವಿತ್ತು. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಭಿಮಾನಿಗಳು ಜಗತ್ತಿಗೇ ಆದರ್ಶಪ್ರಾಯವಾದರು. ಈ ಮೂಲಕ ರಾಜಮಾರ್ಗಕ್ಕೆ ಚ್ಯುತಿ ತರಲಿಲ್ಲ. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!
*ನ. 9 – ಅನ್ನಸಂತರ್ಪಣೆ
ನವೆಂಬರ್ 9 ಅಪ್ಪು ಹೆಸರಲ್ಲಿ ಅನ್ನಸಂತರ್ಪಣೆಯಲ್ಲಿ ದಾಖಲೆ ಸೃಷ್ಟಿಯಾಯ್ತು. 40 ಸಾವಿರ ಅಭಿಮಾನಿಗಳಿಗೆ ಬಾಳೆ ಎಲೆಊಟ. ಕಣ್ಣೀರ ಲೇಪನ ಮಾಡಿ ಅಭಿಮಾನಿಗಳು ಊಟ ಸೇವಿಸಿದರು. ಹೀಗೆ 12 ದಿನವೂ ಅಪ್ಪು ಅಭಿಮಾನಿ ದೇವರುಗಳ ತಾಳ್ಮೆ ಕೈಮೀರಲಿಲ್ಲ. ಅಭಿಮಾನಿಗಳನೇ ನಮ್ಮನೆ ದೇವರು ಅಂತ ಹಾಡಿದ್ದ ಅಪ್ಪುಗೆ ಅಪ್ಪುಗೆಯ ವಿದಾಯ ತಿಳಿಸಲಾಯಿತು.