Connect with us

Bengaluru City

`ದ್ರಾಕ್ಷಿ’, `ಗೋಡಂಬಿ’ ಒಟ್ಟಿಗೆ ಬೇಕೆಂದ ಪ್ರಥಮ್ – ಆಸೆ ಈಡೇರಿಸಿದ ಧ್ರುವ ಸರ್ಜಾ

Published

on

ಬೆಂಗಳೂರು: ಸ್ಯಾಂಡಲ್‍ವುಡ್ ಆಕ್ಷನ್ ಪ್ರಿನ್ಸ್, ಧ್ರುವ ಸರ್ಜಾ ಅವರ ಮದುವೆ ಸುದ್ದಿ ಕೇಳುತ್ತಿದಂತೆ ಸಂತಸಗೊಂಡಿದ್ದ ಅಭಿಮಾನಿಗಳು ಇಬ್ಬರನ್ನ ಒಟ್ಟಿಗೆ ನೋಡಲು ಕಾತುರದಿಂದ ಕಾಯುತ್ತಿದ್ದರು. ಇದರ ನಡುವೆ ನಟ, ಒಳ್ಳೆ ಹುಡುಗ ಪ್ರಥಮ್ ಇಬ್ಬರು ಒಟ್ಟಿಗೆ ಇರುವ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಹುಟ್ಟುಹಬ್ಬ ದಿನದಂದು ಧ್ರುವ ಸರ್ಜಾ ಮದುವೆ ಆಗುತ್ತಿರುವ ವಿಷಯ ಬಿಚ್ಚಿಟ್ಟಿದ್ದರು. ಧ್ರುವ ಸರ್ಜಾ ಯಾವ ಹುಡುಗಿಯನ್ನು ಮದುವೆಯಾಗುತ್ತಾರೆ ಎಂದು ತಿಳಿದುಕೊಳ್ಳಲು ಪ್ರೇರಣಾರ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಪ್ರಥಮ್, ಧ್ರುವ ಸರ್ಜಾರೊಂದಿಗೆ ಪ್ರೇರಣಾ ಅವರನ್ನು ಭೇಟಿ ಮಾಡಿದ್ದು, ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಧೃವ ಸರ್ಜಾ ಅವರ ಬಳಿ ಒಂದೇ ಹಠ ನನ್ನದು. ನನಗೆ ಬರೀ ಗೋಡಂಬಿ ಬೇಡ. ದ್ರಾಕ್ಷಿ-ಗೋಡಂಬಿ ಒಟ್ಟಿಗೆ ಬೇಕು ಎಂದು. ನಿಮ್ಮ ಜೊತೆ ಪ್ರೇರಣಾ ಅವರನ್ನು ಭೇಟಿ ಮಾಡಬೇಕು ಎಂದು ಹೇಳಿದೆ. ಬುಧವಾರ ರಾತ್ರಿ 10:30 ರ ಸಮಯದಲ್ಲಿ ಪ್ರೀತಿಯ ಸೋದರ ಧೃವ ಅವರೇ ಕಾರು ಡ್ರೈವ್ ಮಾಡಿಕೊಂಡು ಪ್ರೇರಣಾ ಅವರ ಮನೆಗೆ ಕರೆದುಕೊಂಡು ಹೋದರು.

ಒಂದು ವಿಷಯ ಹೇಳುತ್ತೇನೆ. ಪ್ರೇರಣಾ ಸಕ್ಕತ್ ಲಕ್ಕಿ ಎಂದು ಎಲ್ಲಾ ಮಾತನಾಡುತ್ತಿದ್ದರು. ಧ್ರುವ ಅವರು ಕೂಡ ಲಕ್ಕಿ. ಅವರ ಮನೆಯಲ್ಲಿ ನಿನ್ನೆ ಅಪ್ಪ-ಅಮ್ಮ ಎಲ್ಲಾ ಇದ್ದರು, ಸಕ್ಕತ್, ತರ್ಲೆ ತಮಾಷೆ ಇತ್ತು. ದಯಾನಂದ ಕಾಲೇಜಲ್ಲಿ ಲೆಕ್ಚರರ್ ಆಗಿರುವ ಪ್ರೇರಣಾ ಅವರು ಧ್ರುವ ಅವರಿಗೆ ಏನು ಪಾಠ ಮಾಡಿರುತ್ತಾರೆ ನೋಡೋಣ ಎಂದು ಹೋಗಿದ್ದೆ. ನಿಜಕ್ಕೂ she is a wonderful soul.

ಪ್ರೇರಣಾ ಅವರಿಗೆ ಪಬ್ಲಿಸಿಟಿ, ಮೀಡಿಯಾ ಇದು ಯಾವುದು ಇಷ್ಟ ಆಗಲ್ಲ. ಸಿಂಪಲ್ ಲೈಫ್ ಅನ್ನು ಸಖತಾಗಿ ಲೀಡ್ ಮಾಡುತ್ತಿದ್ದಾರೆ. ನನ್ನ ಒತ್ತಡಕ್ಕೆ ಮಣಿದು ಧ್ರುವ ಅವರೇ ಕಾರು ಡ್ರೈವ್ ಮಾಡಿಕೊಂಡು ಕರೆದುಕೊಂಡು ಹೋದರು. ಒಂದು ಮಾತು ನಿಜ. ಒಳ್ಳೆ ಜೋಡಿ ಮೇಡ್ ಫಾರ್ ಇಚ್ ಆದರ್ ನಾನು ಎಷ್ಟೇ ಕಾಲು ಎಳೆದರೂ ನಗುತ್ತಾ ಆರಾಮಾವಾಗಿದ್ದರು. ಅತಿ ಶೀಘ್ರ ಡಿಸೆಂಬರ್ 9 ರಂದು ನಿಶ್ಚಿತಾರ್ಥ. ಉಳಿದ ಎಲ್ಲಾ ವಿಷಯ ಅವರು ಅತಿ ಶೀಘ್ರದಲ್ಲಿ ಮಾಧ್ಯಮದ ಮುಂದೆ ಬಹಿರಂಗವಾಗಿ ಮದುವೆ ಆಮಂತ್ರಣ ಕೊಡುತ್ತಾರೆ. ಅಲ್ಲಿಯವರೆಗೂ ಆರಾಮವಾಗಿ ಇರಲಿ ಬಿಡಿ ಈ ಜೋಡಿ.

ಬಟ್ ಪ್ರೇರಣಾ ಅವವರ ಪೋಷಕರಿಗೆ ಧ್ರುವ ಸರ್ಜಾ ಅಂದರೆ ಸಖತ್ ಹೆಮ್ಮೆ. ಆಕ್ಚುವಲಿ ಅಳಿಯಾ ಅಲ್ಲ, ಗೆಳೆಯ ಅವರಿಗೆ ಅಷ್ಟು ಆಪ್ತರು. ಲಾಸ್ಟ್ ಒಂದು ಇಂಟರೆಸ್ಟಿಂಗ್ ವಿಷಯ ಹೇಳುತ್ತೇನೆ. ಪ್ರೇರಣಾ ಅವರ ತಂದೆ ಶಂಕರ್ ಮತ್ತು ಅರ್ಜುನ್ ಸರ್ಜಾ ಅವರು ಕೂಡ ಬೆಸ್ಟ್ ಫ್ರೆಂಡ್ಸ್ ಗೊತ್ತಾ?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *