ಕನ್ನಡದ ಹೆಸರಾಂತ ನಟ ನೀನಾಸಂ ಸತೀಶ್ ಇದೀಗ ಅವರ ಹೊಸ ಸಿನಿಮಾ ‘ಅಶೋಕ ಬ್ಲೇಡ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದದ್ದು ಪ್ರತಿಭಾವಂತ ಬರಹಗಾರ ಟಿ.ಕೆ.ದಯಾನಂದ್. ತಮ್ಮ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ನಡೆದ ಘಟನೆಯೊಂದನ್ನು ದಯಾನಂದ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಬೀದಿಗೆ ಬಿದ್ದಿದ್ದ ಹುಡುಗನಿಗೆ ಹೊಸ ಬದುಕು ರೂಪಿಸುವಲ್ಲಿ ನಟ ಸತೀಶ್ ನೀನಾಸಂ ನೆರವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಓವರ್ ಟು ದಯಾನಂದ್..
Advertisement
ಅಶೋಕ ಬ್ಲೇಡ್ ಶೂಟಿಂಗಲ್ಲಿದ್ದೆ.. ಒಬ್ಬ ಹುಚ್ಚನ ಥರ ಇರೋ ಹುಡುಗ ಖಾಲಿಬಾಟಲಿ ತುಂಬಿದ ಚೀಲವೊಂದನ್ನು ಹಿಡಿದು ಸಿನಿಮ ಸೆಟ್’ನಲ್ಲಿ ಓಡಾಡುತ್ತಿದ್ದ, ನಮ್ಮ ಅಸೋಸಿಯೇಟ್ ಡೈರೆಕ್ಟರ್ ಸುಹಾಸ್ ಸ್ಕ್ರಿಪ್ಟ್ ಹಿಡಿದು ಏನೋ ಪ್ರಿಪೇರ್ ಆಗ್ತಿದ್ದ ವೇಳೆ ಈತ ಸುಹಾಸ್ ಪಕ್ಕ ನಿಂತು ಸ್ಕ್ರಿಪ್ಟನ್ನೇ ನೋಡ್ತಿದ್ದ. ಕುತೂಹಲವಾಗಿ ಪಕ್ಕ ಕೂರಿಸಿಕೊಂಡು ಏನ ಮರಾಯ ವಯಸ್ಸುಡುಗ ಹಿಂಗಾಗಿದಿ? ಯಾವೂರು, ಅಪ್ಪ-ಅಮ್ಮ ಏನ್ಮಾಡ್ತರೆ? ಅಂದೆ. ಬಿಕ್ಕಲು ಶುರುಮಾಡಿದವನು ಒಂದೇ ಸಮ ಅಳತೊಡಗಿದ.
Advertisement
Advertisement
ಅವನದೊಂದು ದಾರುಣ ಕಥೆ. ಈತ ಚಿತ್ರದುರ್ಗದ ಹೊಳಲ್ಕೆರೆಯವ. ಅಪ್ಪ ಮರಳುಲೋಡ್ ಮಾಡುವಾಗ ಟ್ರಾಕ್ಟರ್ ಮಗುಚಿಬಿದ್ದು ತೀರಿದ್ದಾರೆ. ಮಾತು ಬಾರದ ತಾಯಿ ಇವನನ್ನು ಎದೆಯೆತ್ತರ ಸಾಕಿ ಆಕೆಯೂ ತೀರಿದ್ದಾರೆ. ನಂತರ ಈತ ನೋಡಿದ್ದು ಕ್ರೂರ ಸಮಾಜದ ಹತ್ತೆಂಟು ಮುಖಗಳು, ಸಂಬಂಧಗಳು ಯಾತನೆ ಕೊಡಲು ಶುರುವಾದಂತೆ ವೈರಾಗ್ಯ ಹುಟ್ಟಿದವನಂತೆ ಮನೆ ತೊರೆದು ಗರಗರ ಸುತ್ತುತ್ತಿದ್ದಾನೆ. ಹೊಟ್ಟೆಪಾಡಿಗೆ ಬಾಟಲಿ ಆಯುತ್ತಾನೆ, ಕೆಜಿಗೆ 20 ಸಿಗುತ್ತದೆ. ದಿನಕ್ಕೆ 150-200. ಊಟ ಮಾಡಿ ಟ್ರೈನು, ಗುಡಿ, ಫುಟ್’ಪಾತ್ ಎಲ್ಲೆಂದರಲ್ಲಿ ರಾತ್ರಿ ಕಳೆಯುತ್ತಾನೆ. ಇದನ್ನೂ ಓದಿ: ರಾಜಣ್ಣ ಮನೆಯ ಮಿಸ್ಟರ್ ಗರಗಸ ಎಂದು ಕಿಚ್ಚನ ಬಳಿ ದೂರಿಟ್ಟ ಮನೆಮಂದಿ
Advertisement
ಆತ ಹೇಳಿಕೊಂಡ ವ್ಯಥೆಯೊಂದು ಇಲ್ಲಿ ಬರೆಯಲಾಗದಷ್ಟು ಬರ್ಬರವಾಗಿದೆ. ಸಣ್ಣವಯಸ್ಸಿಗೇ ತಿನ್ನಬಾರದ ಏಟುಗಳನ್ನೆಲ್ಲ ತಿಂದು ಬಿಟ್ಟಿದೆ ಈ ಜೀವ. ಅಳುತ್ತಿದ್ದ ಅವನನ್ನು ಎಬ್ಬಿಸಿಕೊಂಡು ಬಟ್ಟೆ ಅಂಗಡಿಗೆ ಒಯ್ದು, ಅವನಿಗಿಷ್ಟವಾದ ಬಟ್ಟೆ ಕೊಡಿಸಿ, ಕಟಿಂಗ್ ಶೇವಿಂಗ್ ಮಾಡಿಸಿದರೆ ಮುದ್ದಾದ ಈ ಹೊಸ ದೇವರಾಜ ತಯಾರಾದ. ನಟ ಸತೀಶ್ ನೀನಾಸಂರಿಗೆ ಪರಿಚಯ ಮಾಡಿಸಿದೆ. ದಿನಬೆಳಗಾದರೆ ಎಲ್ಲರಿಂದ ದೂರ ಓಡಿಸಲ್ಪಡುತ್ತಿದ್ದ ಹುಡುಗ ಕಾನ್ಫಿಡೆಂಟಾಗಿ ಸತೀಶ್ ನೀನಾಸಂರ ಕೈಕುಲುಕಿ ಶೇಕ್ ಹ್ಯಾಂಡ್ ಕೊಟ್ಟ. ಸತೀಶ್’ರಿಗೆ ಎಲ್ಲ ವಿವರಿಸಿದೆ. ಈಗ ದೇವರಾಜನ ಬದುಕಿಗೊಂದು ವ್ಯವಸ್ಥೆಯಾಗುತ್ತಿದೆ. ಸತೀಶ್ ನೀನಾಸಂ, ದೇವರಾಜನ ಬೆನ್ನಿಗೆ ನಿಂತಿದ್ದಾರೆ. ಹೀಗೆ ಶೂಟಿಂಗ್ ನಡುವೆ ನಮ್ಮ ಒಂದು ದಿನ ಸಾರ್ಥಕವಾಯ್ತು.
ಹೀಗೆ ದಯಾನಂದ ದಾರುಣ ಬದುಕಿನ ವ್ಯಥೆಯೊಂದನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅಲ್ಲದೇ, ಈ ಹುಡುಗನ ಊರಿನವರು ಯಾರಾದರೂ ಸಂಪರ್ಕಕ್ಕೆ ಬನ್ನಿ ಎಂದು ಅವರು ಕೇಳಿಕೊಂಡಿದ್ದಾರೆ.