ಮಂಡ್ಯ: ಸಿನಿಮಾ ಚಿತ್ರೀಕರಣ ವೇಳೆ ಗ್ರಾಮೀಣ ಮಕ್ಕಳೊಂದಿಗೆ ನಟ ನಿಖಿಲ್ ಕುಮಾರಸ್ವಾಮಿ ಕ್ರಿಕೆಟ್ ಆಡಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್‍ನ ನಾರ್ಥ್ ಬ್ಯಾಂಕ್ ಬಳಿ ‘ಸೀತಾರಾಮ ಕಲ್ಯಾಣ’ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಚಿತ್ರೀಕರಣ ವೇಳೆ ನಿಖಿಲ್ ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಕಳೆದೊಂದು ವಾರದಿಂದ ಚಿತ್ರೀಕರಣ ನಡೆಯುತ್ತಿದ್ದು, ನಟ ನಿಖಿಲ್ ಜೊತೆ ಕ್ರಿಕೆಟ್ ಆಡಿ ಮಕ್ಕಳು ಸಂಭ್ರಮಿಸಿದ್ದಾರೆ.
Advertisement
ನಿಖಿಲ್ ಕುಮಾರಸ್ವಾಮಿ ತನ್ನ ತಾತನಿಗೋಸ್ಕರ ಹಳ್ಳಿ ಸೊಗಡಿನ ಸೀತಾರಾಮ ಕಲ್ಯಾಣ ಚಿತ್ರ ಮಾಡಲಿದ್ದಾರೆ. ಸಾಂಪ್ರದಾಯಿಕ ಶೈಲಿ ನಿರೂಪಣೆ, ಹಳ್ಳಿ ಸೊಗಡು ಹೆಚ್ ಡಿ ಕುಮಾರಸ್ವಾಮಿ ನಿರ್ಮಾಣದ ಚಿತ್ರಗಳಲ್ಲಿ ಈ ದೃಶ್ಯಗಳನ್ನು ಕಾಣಬಹುದು.
Advertisement
Advertisement
ಇತ್ತೀಚೆಗೆ ಬರುವ ಚಿತ್ರಗಳಲ್ಲಿ ಹಳ್ಳಿ ಸೊಗಡನ್ನು ತೋರಿಸುವ ದೃಶ್ಯಗಳನ್ನು ಕಡಿಮೆಯಾಗಿತ್ತು. ಹೀಗಾಗಿ ಮತ್ತೆ ಹಳ್ಳಿ ವೈಭೋಗದ ದೃಶ್ಯವನ್ನು ತೋರಿಸೋಕೆ ಸೀತಾರಾಮ ಕಲ್ಯಾಣ ಚಿತ್ರ ಬರುತ್ತಿದೆ.
Advertisement
ಮಂಡ್ಯ ಮೈಸೂರು ಭಾಗದ ಹಳ್ಳಿ ಹುಡುಗನಾಗಿ ನಿಖಿಲ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಳೆದ ಐದಾರು ತಿಂಗಳ ಹಿಂದೆಯೇ ಸೆಟ್ಟೇರಿದ್ದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ಜೊತೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ.
ಮೂಲಗಳ ಪ್ರಕಾರ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ವೇಳೆಗೆ ಅದ್ಧೂರಿ ಮದುವೆ ಸೆಟ್ಟನ್ನು ಕ್ರಿಯೇಟ್ ಮಾಡಲಾಗುತ್ತೆ ಎನ್ನುವ ಸುದ್ದಿ ಇದೆ. ಹೀಗಾಗಿ ರೀಲ್ ಲೈಫ್‍ನಲ್ಲಿ ನಟ ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಕಲ್ಯಾಣೋತ್ಸವಕ್ಕೆ ಸಜ್ಜಾಗುತ್ತಿದ್ದಾರೆ.