ಪತ್ನಿಯ ಕೈ ಹಿಡಿದು ಜಾಲಿ ಮೂಡ್‌ಗೆ ಜಾರಿದ ‘ಜಾಗ್ವರ್’ ಹೀರೋ

Public TV
1 Min Read
nikhil kumarswamy

ಸ್ಯಾಂಡಲ್‌ವುಡ್ (Sandalwood) ನಟ ನಿಖಿಲ್ ಕುಮಾರಸ್ವಾಮಿ (Nikhil Kumarswamy)  ಅವರು ಸದ್ಯ ಜಾಲಿ ಮೂಡ್‌ಗೆ ಜಾರಿದ್ದಾರೆ. ಕೆಲದಿನಗಳಿಂದ ಫಾರಿನ್‌ನಲ್ಲಿ ನಿಖಿಲ್ ಫ್ಯಾಮಿಲಿ ಬೀಡು ಬಿಟ್ಟಿದ್ದಾರೆ. ಸದ್ಯ ಪತ್ನಿ ರೇವತಿ (Revathi)  ಕೈ ಹಿಡಿದು ನಿಖಿಲ್ ಕುಮಾರಸ್ವಾಮಿ ಹೆಜ್ಜೆ ಹಾಕ್ತಿರೋದು ವೀಡಿಯೋವೊಂದನ್ನ ಜಾಗ್ವರ್ ಹೀರೋ ನಿಖಿಲ್ ಶೇರ್ ಮಾಡಿದ್ದಾರೆ.

nikhil kumarswamy 2

ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದ ಫ್ಯೂಚರ್ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ- ರಾಜಕೀಯ ಎರಡು ಕ್ಷೇತ್ರದಲ್ಲೂ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಯುರೋಪ್‌ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಾ, ಚೆಂದದ ಫೋಟೋಗಳನ್ನ ಶೇರ್ ಮಾಡುತ್ತಾ ತಮ್ಮ ಬೆಂಬಲಿಗರಿಗೆ ಅಪ್‌ಡೇಟ್ ಕೊಡ್ತಿದ್ದಾರೆ. ಇದೀಗ ಹೊಸ ವೀಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

nikhil

ವಿದೇಶದ ರಸ್ತೆ ಮೇಲೆ ಹೆಂಡತಿ ಕೈ ಹಿಡಿದು ನಿಖಿಲ್ (Nikhil) ವಾಕಿಂಗ್ ಮಾಡ್ತಿರೋ ವಿಡಿಯೋವನ್ನ ನಿಖಿಲ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಓ ಮೈ ಗಾಡ್: ಅಕ್ಷಯ್ ಕುಮಾರ್ ಶಿವನಾಗೋದು ಬೇಡ ಅಂದಿತಾ ಸೆನ್ಸಾರ್ ಮಂಡಳಿ?

Nikhil Kumarswamy

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಅವರ ಇಡೀ ಫ್ಯಾಮಿಲಿ ವಿದೇಶಿ ಪ್ರವಾಸ ಕೈಗೊಂಡಿದೆ. ಕುಮಾರಸ್ವಾಮಿ ವಿದೇಶಿ ಪ್ರವಾಸ ಬೆನ್ನಲ್ಲೇ ರಾಜಕಾರಣದಲ್ಲಿ ಭಾರೀ ಸುದ್ದಿಯಾಗಿತ್ತು. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಿಂಗಾಪುರದಿಂದ ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಕುಮಾರಸ್ವಾಮಿ ಕುಟುಂಬದ ವಿದೇಶಿ ಪ್ರವಾಸದ ಫೋಟೋಗಳು ಗಮನ ಸೆಳೆಯುತ್ತಿದೆ.

ವಿದೇಶದಿಂದ ಬಂದ ಮೇಲೆ ಮತ್ತೆ ನಿಖಿಲ್ ಮತ್ತೆ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗುತ್ತಾರೆ. ‘ಯುದುವೀರ್’ (Yaduveer) ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿದೆ.

Share This Article