– ದಯವಿಟ್ಟು ಕುಮಾರಣ್ಣನ ಅರ್ಥ ಮಾಡ್ಕೊಳ್ಳಿ ಅಂತ ಮನವಿ
ಬೆಂಗಳೂರು: ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಬೆಂಬಲ ಬೆಲೆ ನಿಗದಿಗಾಗಿ ಪ್ರತಿಭಟಿಸುತ್ತಿದ್ದ ರೈತರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅವಮಾನದ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಿಎಂ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿಖಿಲ್, ನಮ್ಮ ತಂದೆಯವರು ಹಾಗೂ ನಮ್ಮ ಕುಟುಂಬದವರೇ ಆಗಲಿ ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತಾ ಬಂದಿದ್ದಾರೆ. ಮುಂದೆನೂ ಕೊಡುತ್ತಾನೆ ಇರುತ್ತೀವಿ. ದಯವಿಟ್ಟು ಇದನ್ನು ಬೇರೆ ಬೇರೆ ರೀತಿ ವಿಶ್ಲೇಷಣೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Advertisement
ಎಲ್ಲಿದ್ರಿ? ಎಲ್ಲಿ ಮಲಗಿದ್ರಿ? ಅಷ್ಟೇ ಅದು. ಅದು ಬಿಟ್ಟು ಎಲ್ಲಿ ಮಲಗಿದ್ರಿ ಎಂದಾಕ್ಷಣ ಅದನ್ನು ಅಪಾರ್ಥ ಮಾಡಿಕೊಳ್ಳಬಾರದು. ರಾಜ್ಯದ ಮುಖ್ಯಮಂತ್ರಿ ಆದವರಿಗೆ ತುಂಬಾ ಒತ್ತಾಡ ಇರುತ್ತದೆ. ನಡೆದಿರುವ ಘಟನೆ ಬಗ್ಗೆ ನಮಗೂ ಬೇಜಾರಾಗಿದೆ. ಈ ವಿಚಾರವಾಗಿ ನಮ್ಮ ತಂದೆ ಜೊತೆ ಮೂರು ಗಂಟೆ ಕುಳಿತ್ತಿದ್ದೆ. ಆಗ ಅವರು ತುಂಬಾ ಮನಸ್ಸಿಗೆ ಬೇಜರಾಗಿದ್ದರು. ನಾವು ಸಮಾಧಾನ ಮಾಡಿದ್ದೇವೆ ಎಂದು ನಿಖಿಲ್ ಹೇಳಿದ್ದಾರೆ.
Advertisement
ರೈತರು ವಿಧಾನಸೌಧ ಮೆಟ್ಟಿಲು ಹತ್ತಿ ಗೇಟು ಹೊಡೆಯುತ್ತಾರೆ ಅಂದರೆ ಸರ್ಕಾರ ಕೈ ಕಟ್ಟಿ ಕೂರಬೇಕಾ? ರೈತರು ಹೀಗೆ ಮಾಡಲ್ಲ. ಅವರು ಮುಗ್ಧರು. ರೈತರು ಹೀಗೆ ಗೂಂಡಾ ವರ್ತನೆ ಮಾಡಲ್ಲ. ಇವತ್ತು ವಿರೋಧ ಪಕ್ಷದವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ, ಕುಮಾರಣ್ಣ ಇಮೇಜ್ ಯಾವ ರೀತಿ ಡ್ಯಾಮೇಜ್ ಮಾಡಬೇಕು ಅಂತ ಪ್ರತಿದಿನ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದವರ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ಮುಖ್ಯಮಂತ್ರಿ ಕುಮಾರಣ್ಣಗೆ ಸಂಪೂರ್ಣವಾಗಿ ಜನರು ಬೆಂಬಲ ಕೊಟ್ಟಿಲ್ಲ. ಆದರೂ ದೇವರ ಆಶೀರ್ವಾದಿಂದ ಇಂದು ಸಿಎಂ ಆಗಿದ್ದಾರೆ. ಎಲ್ಲಿಯವರೆಗೂ ಈ ರಾಜ್ಯದ ಮುಖ್ಯಮಂತ್ರಿಯಾಗಿ ದೇವರು ಆಶೀಸುತ್ತಾನೋ, ಅಲ್ಲಿವರೆಗೂ ಇರುತ್ತೀರಾ ಎಂದು ಹೇಳಿದ್ದೇನೆ. ಅವರು ರಾಜ್ಯದ ಜನತೆಗೆ ತುಂಬಾ ಕೆಲಸ ಮಾಡುತ್ತಿದ್ದಾರೆ. ನಾನು ಅವರ ಮಗನಾಗಿ ಹೇಳುತ್ತಿಲ್ಲ ನಾವು, ಪಕ್ಷದವರು ಚರ್ಚೆ ಮಾಡಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಕನಿಷ್ಠ 50-60% ಸಾಲ ಮನ್ನಾ ಮಾಡುತ್ತೇವೆ ಎಂಬ ಭರವಸೆ ಕೊಡುತ್ತೇನೆ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
ಕುಮಾರಣ್ಣ ಅವರ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ದಯವಿಟ್ಟು ಬಂದು ಕುಳಿತುಕೊಂಡು ಚರ್ಚೆ ಮಾಡಿ. ಇಲ್ಲ ನಿಮ್ಮ ಮನೆಗೆ ಬರಬೇಕೆಂದರು ಕುಮಾರಣ್ಣ ಬರುತ್ತಾರೆ. ಯಾಕೆಂದರೆ ನಿಮ್ಮಿಂದ ನಾವು ಇರುವುದು. ನಿಮಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ದಯವಿಟ್ಟು ಕುಮಾರಣ್ಣ ಅವರನ್ನು ಅರ್ಥ ಮಾಡಿಕೊಳ್ಳಿ. ಈ ರೀತಿ ಆಕ್ರೋಶ ವ್ಯಕ್ತ ಪಡಿಸಬೇಡಿ, ತಾಳ್ಮೆ ಕಳೆದುಕೊಳ್ಳಬೇಡಿ, ವಿರೋಧ ಪಕ್ಷದ ಮಾತಿಗೆ ಮರುಳಾಗದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews