ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮನೆಯ ಕುಡಿ ಜಾಗ್ವಾರ್ ಖ್ಯಾತಿಯ ನಿಖಿಲ್ ಗೌಡ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
28ನೇ ವಸಂತಕ್ಕೆ ಕಾಲಿಟ್ಟ ನಿಖಿಲ್ ಗೌಡ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ನಿಖಿಲ್ ನರೆದಿದ್ದವರನ್ನು ಸಂತೋಷ ಪಡಿಸಿದರು.
Advertisement
Advertisement
ರಾಜಕೀಯ ಕೆಲಸ ಕಾರ್ಯಗಳ ನಿಮಿತ್ತ ತಂದೆ ಹೆಚ್ ಡಿ ಕುಮಾರಸ್ವಾಮಿ ಜೆಪಿ ನಗರದ ಮನೆಯಲ್ಲಿರಲಿಲ್ಲ. ಆದರೂ ನಿಖಿಲ್ ಹುಟ್ಟುಹಬ್ಬದ ಸಂಭ್ರಮ ಮುಗಿಲುಮುಟ್ಟಿತ್ತು.
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುನಿರೀಕ್ಷೆ ಹುಟ್ಟು ಹಾಕಿರುವ `ಕುರುಕ್ಷೇತ’್ರ ಚಿತ್ರ ಮಾರ್ಚ್‍ಗೆ ತೆರೆಕಾಣಲಿದೆ. ದರ್ಶನ್ ಅಭಿನಯನದ 50 ನೇ ಮತ್ತು ನಿಖಿಲ್ ಅಭಿನಯನದ 2ನೇ ಚಿತ್ರ. ಎಲ್ಲರಿಗೂ ಅಭಿನಂದನೆಗಳು. ಮುಂಬರುವ ಚುನಾವಣೆಯಲ್ಲಿ ತಂದೆಗೆ ಪ್ರಚಾರದಲ್ಲಿ ನೆರವಾಗುತ್ತೇನೆ. ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಕುರುಕ್ಷೇತ್ರದ ಚಿತ್ರ ಗೆಲ್ಲುವ ವಿಶ್ವಾಸವಿದೆ. ಇದೀಗ ಬಜರಂಗಿ ಖ್ಯಾತಿಯ ಹರ್ಷ ಜೊತೆ `ಸೀತರಾಮಕಲ್ಯಾಣ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂದರು.