– ದೀಪಿಕಾ ಮೇಲೆ ಯಾವುದೇ ಸಿಟ್ಟಿಲ್ಲ, ನಾನೂ ಮದ್ವೆ ಆಗ್ತೀದ್ದಿನಿ
ಮುಂಬೈ: ಬಾಲಿವುಡ್ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ 2018, ನವೆಂಬರ್ ನಲ್ಲಿ ಬಹುದಿನಗಳ ಗೆಳೆಯ ರಣ್‍ವೀರ್ ಸಿಂಗ್‍ರನ್ನು ಮದುವೆಯಾಗಿದ್ದಾರೆ. ಇದೀಗ ದೀಪಿಕಾರ ಮಾಜಿ ಗೆಳೆಯ ಸಹ ಮದುವೆ ತಯಾರಿಯಲ್ಲಿದ್ದು, ಖ್ಯಾತ ಗಾಯಕಿಯನ್ನು ವರಿಸಲಿದ್ದಾರೆ. ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನನ್ನನ್ನು ದೀಪಿಕಾಳ ಎಕ್ ಎಂದು ಕರೆಯಬೇಡಿ ಎಂದು ಪರೋಕ್ಷವಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಇನ್ನು ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿರಲಿಲ್ಲ. ಮುಂಬೈನ ನಟನಾ ತರಬೇತಿಯಲ್ಲಿ ನಿಹಾರ್ ಪಾಂಡ್ಯಾ ಮತ್ತು ದೀಪಿಕಾ ಪಡುಕೋಣೆ ಪರಿಚಯವಾಗಿದ್ದರು. ಇಬ್ಬರು ಪ್ರೇಮಪಾಶದಲ್ಲಿ ಬಂಧನಕ್ಕೂ ಒಳಗಾಗಿದ್ದರು ಎಂಬುವುದು ಬಾಲಿವುಡ್ ಅಂಗಳದಲ್ಲಿ ಇಂದು ಹರಿದಾಡುತ್ತಿರುಯವ ವಿಷಯ. ತದನಂತರ ದೀಪಿಕಾ ನಟನೆಯ ಓಂ ಶಾಂತಿ ಓಂ ಸಿನಿಮಾದ ಬಳಿಕ ಗುಳಿಕೆನ್ನೆಯ ಬೆಡಗಿಯ ಜೀವನವೇ ಬದಲಾಯ್ತು. ಇತ್ತ ನಿಹಾರ್ ಪಾಂಡ್ಯ ಕೇವಲ ಧಾರಾವಾಹಿ, ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಇಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ಬೇರೆ ಆಗಿದ್ದರಂತೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಿಹಾರ್ ಪಾಂಡ್ಯ, ದೀಪಿಕಾ ಮದುವೆಯಾಗಿದ್ದು, ಅವರ ಮೇಲೆ ನನಗೆ ಯಾವುದೇ ಕೋಪವಿಲ್ಲ. ಅವರ ಜೀವನ ಸುಖವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.
ಇಂದು ಸಹ ನಿಹಾರ್ ಪಾಂಡ್ಯರನ್ನು ದೀಪಿಕಾರ ಮಾಜಿ ಗೆಳೆಯ ಅಂತಾನೇ ಗುರುತಿಸುವುದುಂಟು. ದೀಪಿಕಾ ಮದುವೆ ಬಳಿಕ ನಿಹಾರ್ ಸಹ ಖ್ಯಾತ ಗಾಯಕಿ ನೀತಿ ಮೋಹನ್ ಅವರನ್ನು ವರಿಸಲಿದ್ದಾರೆ. ನಿಹಾರ್ ‘ಮಣಿಕರ್ಣಿಕಾ’ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಕಂಗನಾ ರಣಾವತ್ ಲೀಡ್ ರೋಲ್‍ನಲ್ಲಿ ನಟಿಸಿದ್ದು, ಜನವರಿ 25ರಂದು ಚಿ ತ್ರ ತೆರೆಕಾಣಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv