ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುವ ನಟ ಸತೀಶ್ ನೀನಾಸಂ ಮೊದಲ ಬಾರಿಗೆ ಆಲ್ಬಂವೊಂದಕ್ಕೆ ದನಿಯಾಗಿದ್ದಾರೆ. ಈಗಾಗಲೇ ಮೂರು ಸಿನಿಮಾಗಳಿಗೆ ಹಾಡಿರುವ ಇವರು, ಇದೇ ಮೊದಲ ಬಾರಿಗೆ ಮಗಳ ಜತೆ ‘ಅಶರೀರವಾಣಿ’ ಆಲ್ಬಂಗಾಗಿ ಹಾಡಿದ್ದಾರೆ. ನಾಳೆ ಈ ಗೀತೆ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..
‘ಅಶರೀರವಾಣಿ, ಎಲ್ಲಿಂದ ಏನೋ’ ಎಂದು ಸಾಹಿತ್ಯದಿಂದ ಶುರುವಾಗುವ ಈ ಗೀತೆಯು ಮನುಷ್ಯ ಸಂಬಂಧದ ಹಲವು ಮಜಲುಗಳನ್ನು ತೆರೆದಿಡಲಿದೆ. ಒಂದು ರೀತಿಯಲ್ಲಿ ಸಾಹಿತ್ಯ ತತ್ವಪದ, ಸೋಫಿಗಳ ಶೈಲಿಯಲ್ಲಿದ್ದು, ಅದಕ್ಕೆ ಆಧುನಿಕ ಸಂಗೀತವನ್ನು ಬೆರೆಸಿರುವುದು ಹಾಡಿನ ವಿಶೇಷತೆ. ಮರೆಯಾದ ಮನಸುಗಳ ನೆನಪುಗಳನ್ನೇ ಹೊತ್ತು ತರಲಿರುವ ಈ ಗೀತೆಗೆ ಸಾಹಿತ್ಯವನ್ನು ಬರೆದದ್ದು ಮತ್ತು ಸಂಗೀತ ಸಂಯೋಜನೆ ಮಾಡಿದ್ದು ಸ್ವತಃ ಸತೀಶ್ ಅವರೇ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ನಾನು ಜ್ಯೂನಿಯರ್ ಪುನೀತ್ ರಾಜ್ ಕುಮಾರ್ ಅಲ್ಲ : ಮಾರಕಾಸ್ತ್ರ ಹೀರೋ ಹೇಳಿಕೆ
ಸತೀಶ್ ಹಾಡಿಗೆ ಮಗಳು ಮನಸ್ವಿತ ದನಿ
ಇತ್ತೀಚೆಗಷ್ಟೇ ಅಭಿಮಾನಿಗಳಿಗೆ ಪುತ್ರಿ ಮನಸ್ವಿತ ಫೋಟೋ ಹಂಚಿಕೊಂಡಿದ್ದ ಸತೀಶ್, ಈ ಬಾರಿ ತಮ್ಮೊಂದಿಗೆ ಮಗಳು ಹಾಡಿದ ಈ ಗೀತೆಯನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆ. ಈ ಹಾಡಿನಲ್ಲಿ ಮನಸ್ವಿತರ ದನಿಯನ್ನು ಕೇಳಬಹುದಾಗಿದೆ. ಅಲ್ಲದೇ, ಇದು ವಿಡಿಯೋ ರೂಪದಲ್ಲೂ ಚಿತ್ರೀಕರಣವಾಗಿದ್ದು, ಅದರಲ್ಲಿ ಮನಸ್ವಿತ ಕಾಣಿಸಿಕೊಂಡಿದ್ದಾರೆ. ಡ್ರಮ್ ನುಡಿಸುತ್ತಾ ಅಪ್ಪನ ಹಾಡಿಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ : ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್
ಮೂರು ಸಿನಿಮಾಗಳಿಗೆ ಹಾಡಿರುವ ಅಂಜದ ಗಂಡು
ನೀನಾಸಂನಲ್ಲಿ ಇರುವಾಗಲೇ ಹಾಡಿನತ್ತ ಆಸಕ್ತಿ ತೋರಿದವರು ಸತೀಶ್. ಅಲ್ಲಿ ಸಾಕಷ್ಟು ರಂಗಗೀತೆಗಳನ್ನು ಹಾಡುತ್ತಿದ್ದರು. ಹಾಡುವುದು ವೃತ್ತಿಯಲ್ಲವಾದರೂ, ಹವ್ಯಾಸಿಯೇ ಅವರನ್ನು ಮೂರು ಸಿನಿಮಾಗಳಿಗೆ ಹಾಡುವಂತೆ ಮಾಡಿದೆ. ತಮ್ಮದೇ ನಟನೆಯ ‘ಅಂಜದ ಗಂಡು’ ಚಿತ್ರಕ್ಕಾಗಿ ಟೈಟಲ್ ಟ್ರ್ಯಾಕ್, ‘ರಾಕೇಟ್’ ಚಿತ್ರಕ್ಕಾಗಿ ರಂಗಿ ರಂಗಿ ಮತ್ತು ಡಿ.ಎನ್.ಎ ಚಿತ್ರಕ್ಕಾಗಿ ನಾವ್ಯಾರು ಎಲ್ಲಿಂದ.. ಎನ್ನುವ ಗೀತೆಗಳನ್ನು ಹಾಡಿದ್ದರು. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
ಎರಡು ಭಾಷೆಗಳಲ್ಲಿ ಅಶರೀರವಾಣಿ
ಅಶರೀರವಾಣಿ ಹೆಸರಿನಲ್ಲಿ ರಿಲೀಸ್ ಆಗಲಿರುವ ಈ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿದ್ಧವಾಗಿದೆ. ಎರಡೂ ಭಾಷೆಯಲ್ಲೂ ಸತೀಶ್ ಅವರೇ ಹಾಡಿದ್ದಾರೆ. ಮೊದಲು ಕನ್ನಡದಲ್ಲಿ ಸಾಂಗ್ ಬಿಡುಗಡೆ ಆಗಲಿದ್ದು, ನಂತರದಲ್ಲಿ ತಮಿಳಿನಲ್ಲೂ ಈ ಗೀತೆ ರಿಲೀಸ್ ಆಗಲಿದೆ. ಇದನ್ನೂ ಓದಿ : ಇಂಗ್ಲಿಷ್ ನಲ್ಲೂ ಬರುತ್ತಂತೆ ಕೆಜಿಎಫ್ 2 : ಹಾಲಿವುಡ್ ನಲ್ಲೂ ರಾಕಿಭಾಯ್ ಹವಾ
ಡಬಲ್ ಖುಷಿಯಲ್ಲಿ ಸತೀಶ್
ಒಂದು ಕಡೆ ಸತೀಶ್ ಅವರ ಆಲ್ಬಂ ರಿಲೀಸ್ ಆಗುತ್ತಿದ್ದರೆ ಮತ್ತೊಂದು ಕಡೆ ಕೈ ತುಂಬಾ ಚಿತ್ರಗಳನ್ನಿಟ್ಟುಕೊಂಡು ಕೂತಿದ್ದಾರೆ. ಗೋಧ್ರಾ ಮತ್ತು ಪೆಟ್ರೊಮ್ಯಾಕ್ಸ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದಸರಾ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಸದ್ಯ ಮ್ಯಾಟ್ನಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜತೆಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಅಂದುಕೊಂಡಂತೆ ಆದರೆ, ಈ ವರ್ಷ ಇವರ ಮೂರು ಚಿತ್ರಗಳ ಬಿಡುಗಡೆ ಆಗಬಹುದು.