ತೆಲುಗಿನ ಖ್ಯಾತ ಚಿತ್ರನಟ ಮತ್ತು ರಾಜಕಾರಣಿ ನಂದಮೂರಿ ತಾರಕರತ್ನ (Nandamuri Tarakaratna) ಆರೋಗ್ಯ (health) ಸ್ಥಿತಿ ಗಂಭೀರವಾಗಿದೆ (serious) ಎಂದು ನಾರಾಯಣ ಹೃದಯಾಲಯ ತಜ್ಞರು ತಿಳಿಸಿದ್ದಾರೆ. ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ (health bulletin) ರಿಲೀಸ್ ಮಾಡಿದ್ದು, ಆರೋಗ್ಯ ತೀರಾ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದೆ. ಹೃದಯದ ರಕ್ತನಾಳುಗಳು ಬ್ಲಾಕ್ ಆಗಿರುವುದರಿಂದ ಅವುಗಳನ್ನು ಸರಿಪಡಿಸಲು ವೈದ್ಯರು ಸತತ ಪ್ರಯತ್ನ ನಡೆಸಿರುವುದಾಗಿ ತಿಳಿಸಿದೆ.
Advertisement
ಇಂಟ್ರಾ ಅಯೋರ್ಟಿಕ್ ಪಂಪ್, ವ್ಯಾಸೋಆಕ್ಟಿವ್ ನೆರವಿನಿಂದಲೂ ಚಿಕಿತ್ಸೆ ನೀಡಲಾಗಿದ್ದು, ಆಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ. ಸ್ಟಂಟ್ ಅಳವಡಿಕೆಯ ನಂತರವೂ ರಕ್ತಸ್ರಾವ ನಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಆದರೂ, ನುರಿತ ವೈದ್ಯರ ತಂಡ ಚಿಕಿತ್ಸೆಯನ್ನು ಮುಂದುವರೆಸಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್ಮೆಂಟ್
Advertisement
Advertisement
ನಂದಮೂರಿ ತಾರಕರತ್ನ ಅವರಿಗೆ ಶುಕ್ರವಾರ ತೀವ್ರ ಹೃದಯಾಘಾತ (Heart Attack) ವಾಗಿತ್ತು, ಕೂಡಲೇ ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿತ್ತು. ತಡರಾತ್ರಿ 12 ಗಂಟೆ ಸಂದರ್ಭದಲ್ಲಿ ಆಂಧ್ರದ ಕುಪ್ಪಂನಿಂದ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬಳಿಕ ಯಶಸ್ವಿಯಾಗಿ ಆಂಜಿಯೋಗ್ರಾಮ್ (Angiogram) ಮಾಡಿ ಸ್ಟಂಟ್ ಅಳವಡಿಕೆ ಮಾಡಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿರುವುದಾಗಿ ಆಸ್ಪತ್ರೆ ಮೂಲಗಳು ಬೆಳಗ್ಗೆ ಮಾಹಿತಿ ನೀಡಿದ್ದವು.
Advertisement
ತಾರಕರತ್ನ ಅವರು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಯುವ ಗಲಮ್ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಪ್ಪಂಗೆ ತೆರಳಿದ್ದರು. ಲೋಕೇಶ್ ಮಸೀದಿಯಿಂದ ಪ್ರಾರ್ಥನೆ ಸಲ್ಲಿಸಿ ಹೊರಬಂದಾಗ ಅಲ್ಲಿ ನೆರೆದಿದ್ದ ಟಿಡಿಪಿ ಕಾರ್ಯಕರ್ತರು ಏಕಾಏಕಿ ಲೋಕೇಶ್ ಕಡೆಗೆ ನುಗ್ಗಿದ್ದು, ಅಲ್ಲಿಯೇ ನಿಂತಿದ್ದ ತಾರಕರತ್ನ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಕುಪ್ಪಂನ ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಪಿಇಎಸ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ಪಿಇಎಸ್ ವೈದ್ಯಕೀಯ ಕಾಲೇಜು ವೈದ್ಯರ ಸಲಹೆಯಂತೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k