ಸಮಂತಾ (Samantha) ಮಾಜಿ ಪತಿ ನಾಗಚೈತನ್ಯ (Nagachaitanya) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಹೆಣ್ಣಿನ ಮನೆಯಲ್ಲಿ ಮದುವೆ (Wedding) ಶಾಸ್ತ್ರ ಶುರು ಆಗಿದೆ. ಸಂಭ್ರಮದ ಸುಂದರ ಫೋಟೋಗಳನ್ನು ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- Advertisement -
ನಾಗಚೈತನ್ಯ ಅವರ 2ನೇ ಮದುವೆ ಯಾವಾಗ ಎಂದು ಗುಟ್ಟು ಬಿಟ್ಟು ಕೊಡದೆ ಸೈಲೆಂಟ್ ಮದುವೆ ಶಾಸ್ತ್ರಗಳನ್ನು ಶುರು ಮಾಡಿದ್ದಾರೆ. ಸದ್ದಿಲ್ಲದೆ ಹೆಣ್ಣಿನ ಮನೆಯಲ್ಲಿ ಮದುವೆ ಶಾಸ್ತ್ರ ಜರುಗಿದೆ. ಕೆಂಪು ಬಣ್ಣದ ಸೀರೆಯುಟ್ಟು ನಗುತ್ತಾ ಅರಿಶಿಣವನ್ನು ಕಟ್ಟುವ ಶಾಸ್ತ್ರದಲ್ಲಿ ಶೋಭಿತಾ (Sobhita Dhuliapala) ಕಾಣಿಸಿಕೊಂಡಿದ್ದಾರೆ.
- Advertisement -
- Advertisement -
ಆದರೆ ಮದುವೆ ಯಾವಾಗ? ಎಲ್ಲಿ ಎಂಬುದನ್ನು ಎಲ್ಲೂ ರಿವೀಲ್ ಮಾಡಿಲ್ಲ. ಆದರೆ ರಾಜಸ್ಥಾನದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಮದುವೆ ನಡೆಯಲಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದು ನಿಜನಾ? ಎಂಬುದು ಖಾತ್ರಿಯಾಗಿಲ್ಲ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಶ್ರುತಿ ಕುಟುಂಬದ ಮನೆ ಮಗಳು
- Advertisement -
ಅಂದಹಾಗೆ, ಆಗಸ್ಟ್ 8ರಂದು ನಾಗಚೈತನ್ಯ ಅವರು ಶೋಭಿತಾ ಜೊತೆ ತಮ್ಮ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಆದರು. ಈ ಸಂಭ್ರಮದ ವಿಚಾರವನ್ನು ನಾಗರ್ಜುನ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದರು.
ಇನ್ನೂ 2017ರಲ್ಲಿ ಸ್ಟಾರ್ ನಟಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಆದರೆ 2021ರಲ್ಲಿ ಕೆಲ ಮನಸ್ತಾಪಗಳಿಂದ ಇಬ್ಬರೂ ಬೇರೆಯಾದರು. 4 ವರ್ಷಗಳ ದಾಂಪತ್ಯಕ್ಕೆ ಇಬ್ಬರೂ ಅಂತ್ಯ ಹಾಡಿದರು.