ನಟ ನಾಗಭೂಷಣ್ (Nagabhushan) ನಟನೆಯ ‘ವಿದ್ಯಾಪತಿ’ (Vidyapati) ಸಿನಿಮಾ ಇಂದು (ಏ.10) ಬಿಡುಗಡೆಯಾಗಿದೆ. ಡಾಲಿ ಧನಂಜಯ ನಿರ್ಮಾಣ ಮಾಡಿರುವ ಈ ಸಿನಿಮಾದ ಟ್ರೈಲರ್ ಈಗಾಗಲೇ ಸಂಚಲನ ಸೃಷ್ಟಿಸಿದೆ. ಬಹುತೇಕ ಎಲ್ಲಾ ಅಭಿರುಚಿಯ ಪ್ರೇಕ್ಷಕರು ಕೂಡ ‘ವಿದ್ಯಾಪತಿ’ಯನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ‘ವಿದ್ಯಾಪತಿ’ ಭಿನ್ನ ಕಥಾನಕವನ್ನೊಳಗೊಂಡಿರೋ ಚಿತ್ರ. ಇದನ್ನೂ ಓದಿ:‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು ಡಾಲಿ!
ಇಶಾಂ ಹಾಗೂ ಹಸೀಂ ನಿರ್ದೇಶನ ಮಾಡಿರುವ ಈ ಸಿನಿಮಾದ ಅಸಲಿ ಸ್ವಾದದ ಸುಳಿವು ಟ್ರೈಲರ್ ಮೂಲಕವೇ ಜಾಹೀರಾಗಿತ್ತು. ಒಟ್ಟಾರೆ ಕಥನದ ಕೊಂಬೆ ಕೋವೆಗಳ ಸೂಕ್ಷ್ಮಗಳೂ ಕೂಡ ಇದರೊಂದಿಗೆ ಜಾಹೀರಾದಂತಾಗಿತ್ತು. ಈ ಬಗ್ಗೆ ನಾಯಕ ನಟ ನಾಗಭೂಷಣ್ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ನಾಗಭೂಷಣ್ ಅವರಿಗೆ ಈ ಸಿನಿಮಾದಲ್ಲಿ ಅತ್ಯಪರೂಪದ ಪಾತ್ರ ಸಿಕ್ಕಿದೆ. ಸೂಪರ್ ಸ್ಟಾರ್ ವಿದ್ಯಾಳ ಪತಿ ಎಂಬುದನ್ನೇ ಬಲವಾಗಿಸಿಕೊಂಡು, ಅತೀವ ಹಣದ ವ್ಯಾಮೋಹದ ಪಾತ್ರದಲ್ಲಿ ಅವರು ನಟಿಸಿದ್ದಾರಂತೆ. ಅದರಾಚೆಗೆ ಪಕ್ಕಾ ಮಾಸ್ ಅವತಾರದಲ್ಲಿಯೂ ಕೂಡ ನಾಗಭೂಷಣ್ ಕಾಣಿಸಿಕೊಂಡಿದ್ದಾರಾ? ಇಂಥಾದ್ದೊಂದು ಪ್ರಶ್ನೆ ಟ್ರೈಲರ್ ನೋಡಿದ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಇಂದು ಮಜವಾದ ಉತ್ತರ ಸಿಗಲಿದೆ. ಇದನ್ನೂ ಓದಿ:ಕೊಲೆ ಕೇಸ್ ಸಾಕ್ಷ್ಯಿಧಾರನ ಜೊತೆ ಪ್ರಭಾವ ಬೀರುತ್ತಿದ್ದಾರಾ ದರ್ಶನ್?
ಸೂಪರ್ ಸ್ಟಾರ್ ವಿದ್ಯಾಳ ಪತಿಯಾಗಿ, ಆ ಪ್ರಭೆಯಲ್ಲಿ ಶೋಕಿ ಮಾಡೋ ನಾಯಕನ ಪಾತ್ರಕ್ಕಿಲ್ಲ ಒಂದಷ್ಟು ಚಹರೆಗಳಿದ್ದಾವೆ. ಈ ಹಾದಿಯಲ್ಲಿ ಎಂತೆಂಥಾ ವಿಚಾರಗಳು ಘಟಿಸುತ್ತವೆಂಬುದೇ ಸಿನಿಮಾದ ಜೀವಾಳ. ಅನೇಕ ಟ್ವಿಸ್ಟುಗಳೊಂದಿಗೆ, ಭರಪೂರ ಮನೋರಂಜನಾತ್ಮಕವಾಗಿ ಈ ಸಿನಿಮಾವನ್ನು ರೂಪಿಸಲಾಗಿದೆ. ಆರಂಭ ಕಾಲದಲ್ಲಿ ಸಣ್ಣಪುಟ್ಟ ಪಪಾತ್ರಗಳನ್ನು ಮಾಡುತ್ತಾ ಬಂದಿದ್ದ ನಾಗಭೂಷಣ್ ಅವರ ಪಾಲಿಗೆ ನಾಯಕ ನಟನಾಗಬೇಕೆಂಬ ಯಾವ ಇರಾದೆಯೂ ಇರಲಿಲ್ಲ. ಸಿಕ್ಕ ಪಾತ್ರಗಳನ್ನು ಚೆಂದಗೆ ಬಳಸಿಕೊಂಡು ಉತ್ತಮ ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬುದಷ್ಟೇ ಅವರ ಗುರಿಯಾಗಿತ್ತು. ಆದರೆ, ಅಚಾನಕ್ಕಾಗಿ ನಾಯಕನಾಗೋ ಅವಕಾಶ ಒಲಿದು ಬಂದು, ಆ ಹಾದಿಯಲ್ಲಿ ಮುಂದುವರೆಯುತ್ತಾ ಬಂದಿರುವ ನಾಗಭೂಷಣ್ ಪಾಲಿಗೆ ‘ವಿದ್ಯಾಪತಿ’ ರೋಮಾಂಚಕ ತಿರುವು ಕೊಡುವ ಲಕ್ಷಣಗಳು ಕಾಣಿಸುತ್ತಿವೆ.
ಡಾಲಿ ಧನಂಜಯ (Daali Dhananjay) ಅತ್ಯಂತ ಮಹತ್ವಾಕಾಂಕ್ಷೆಯಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಮ್ಮ ಗೆಳೆಯ ನಾಗಭೂಷಣ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಒಂದು ಪ್ರತಿಭಾನ್ವಿತ ತಂಡದೊಂದಿಗೆ ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್ (Malaika Vasupal), ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ ನಿರ್ಮಾಣ ಮಾಡಿರುವ ಈ ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ.