ತೆಲುಗಿನ ನಟ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಡಿ.4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಸಂಭ್ರಮದಿಂದ ಮದುವೆಯಾಗಿರುವ (Wedding) ಬ್ಯೂಟಿಫುಲ್ ಫೋಟೋವನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಅನ್ನಪೂರ್ಣ ಸ್ಟುಡಿಯೋದಲ್ಲಿ ಡಿ.4ರಂದು ರಾತ್ರಿ 8:15ಕ್ಕೆ ಶೋಭಿತಾ ಮತ್ತು ನಾಗಚೈತನ್ಯ ಹಸೆಮಣೆ ಏರಿದರು. ಖುಷಿ ಖುಷಿಯಾಗಿ ಇಬ್ಬರೂ ಮದುವೆಯಾಗಿದ್ದಾರೆ.
ಮದುವೆಯಲ್ಲಿ ಶೋಭಿತಾ ಮತ್ತು ನಾಗಚೈತನ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟಿ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ.
ಇನ್ನೂ ಶೋಭಿತಾ ಮತ್ತು ನಾಗಚೈತನ್ಯ ಕಾಲೇಜು ದಿನಗಳಿಂದ ಪರಿಚಿತರು. ಸಮಂತಾ (Samantha) ಜೊತೆಗಿನ ದಾಂಪತ್ಯಕ್ಕೆ ಪೂರ್ಣ ವಿರಾಮ ಬಿದ್ಮೇಲೆ ಶೋಭಿತಾ ಎಂಟ್ರಿ ಕೊಟ್ಟರು. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?
ಎರಡೂವರೆ ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ನಾಗಚೈತನ್ಯ ಮತ್ತು ಶೋಭಿತಾ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಈ ಜೋಡಿಗೆ ಶುಭಕೋರಲು ನ್ಯಾಚುರಲ್ ಸ್ಟಾರ್ ನಾನಿ ದಂಪತಿ, ನಟ ಕಾರ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಈ ವರ್ಷ ಆಗಸ್ಟ್ 8ರಂದು ಈ ಜೋಡಿ ನಿಶ್ಚಿತಾರ್ಥ ಕಾರ್ಯಕ್ರಮ ನಟನ ನಿವಾಸದಲ್ಲಿ ಸರಳವಾಗಿ ಜರುಗಿತು. ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಅವರು ಸೊಸೆಯನ್ನು ಫ್ಯಾನ್ಸ್‌ಗೆ ಪರಿಚಿಯಿಸಿದರು.
ಅಂದಹಾಗೆ, ‘ಯೇ ಮಾಯ ಚೇಸಾವೆ’ ಸಿನಿಮಾದಲ್ಲಿ ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿ ನಟಿಸಿದರು. ಈ ವೇಳೆ, ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಹಲವು ವರ್ಷಗಳ ಡೇಟಿಂಗ್ ನಂತರ 2017ರಲ್ಲಿ ಹಿಂದೂ ಮತ್ತು ಕ್ರೈಸ್ತ ಧರ್ಮದಂತೆ ಇಬ್ಬರ ಮದುವೆ ನಡೆದಿತ್ತು.
ಕೆಲ ಮನಸ್ತಾಪಗಳಿಂದ 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಘೋಷಿಸಿದರು. 4 ವರ್ಷಗಳ ದಾಂಪತ್ಯಕ್ಕೆ ಈ ಜೋಡಿ ಅಂತ್ಯ ಹಾಡಿದರು.
View this post on Instagram
ಇನ್ನೂ ಸಮಂತಾ ಡಿವೋರ್ಸ್ ವಿಚಾರ ತಂದೆ ಜೋಸೆಫ್ ಪ್ರಭುಗೆ ನೋವುಂಟು ಮಾಡಿತ್ತು. ಈ ನೋವಿನಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಂಡಿದರು. ನಾಗಚೈತನ್ಯ ಮದುವೆಯ 1 ವಾರಗಳ ಮುನ್ನ ಅಂದರೆ ನ.29ರಂದು ಸಮಂತಾ ತಂದೆ ನಿಧನರಾದರು.